Breaking News

ಸ್ಯಾಂಟ್ರೋ ರವಿ ಹಣ ಲೆಕ್ಕ ಮಾಡಿದ್ದು ಆರಗ ಮನೆಯಲ್ಲೇ: H.D.K.

Spread the love

ಳಂದ: ಸ್ಯಾಂಟ್ರೋ ರವಿ ಜತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆಕಂತೆ ನೋಟುಗಳ ಜತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣ ಲೆಕ್ಕ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.

ಡಿ. ಕುಮಾರಸ್ವಾಮಿ ಹೇಳಿದರು.

ಖಜೂರಿಯಲ್ಲಿ ಸೋಮವಾರ ಜರಗಿದ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸೋಮಶೇಖರ್‌ ಜತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಆ ವೀಡಿಯೋ ರೆಕಾರ್ಡ್‌ ನಾನು ಮಾಡಿಸಿದ್ದಲ್ಲ. ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗಿಲ್ಲ. ದಲ್ಲಾಳಿಗಳೇ ಆಡಳಿತ ನಡೆಸುವ ಸ್ಥಿತಿಯನ್ನು ಬೊಮ್ಮಾಯಿ ಸೃಷ್ಟಿ ಮಾಡಿ ಕೊಂಡಿದ್ದಾರೆ ಎಂದರು.

ನಿಮ್ಮ ತಂದೆ ಹೇಳಿಕೊಟ್ಟಿದ್ದು ಇದೇನಾ ಬೊಮ್ಮಾಯಿ ಅವರೇ? ಸಿಎಂ ಮನೆ ಕೂಗಳತೆ ದೂರ ದಲ್ಲಿ ಇದೆಲ್ಲ ಅಸಹ್ಯ ನಡೆದಿದೆ. ನಿಮ್ಮ ತಂದೆಯವರಿಂದ ನೀವು ಕಲಿತದ್ದು ಇದೇನಾ ಬೊಮ್ಮಾಯಿಯ ವರೇ ಎಂದು ಎಚ್‌ಡಿಕೆ ಪ್ರಶ್ನಿಸಿದರು.

ನನ್ನ ಮೇಲೆ ಮಾಡಿದ ಆರೋಪವನ್ನು ಎಚ್‌.ಡಿ. ಕುಮಾರಸ್ವಾಮಿ ಸಾಬೀತು ಮಾಡಬೇಕು. ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು ಸತ್ಯಕ್ಕೆ ಅಪಚಾರವಾಗುವಂಥ ಆಪಾದನೆ ಮಾಡಿದ್ದಾರೆ. ಯಾವ ಕಾರಣದಿಂದ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು
ತಿಳಿಯುತ್ತಿಲ್ಲ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ