ತಲ್ವಾರ್, ಮಚ್ಚು, ಚಾಕು, ಕುಡಗೋಲು ಇಟ್ಟು ಪೂಜೆ ಮಾಡಬೇಕು ಎಂದ: ಮುತಾಲಿಕ್

Spread the love

ಬೆಳಗಾವಿ: ಮುಸ್ಲಿಮರ ಜೊತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್ ಗೆ ಬೆಂಬಲ ನೀಡಿದಂತೆ ಎಂದು ಪ್ರಮೋದ ಮುತಾಲಿಕ ವಾಗ್ದಾಳಿ ನಡೆಸಿದರು.

ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಮೈದಾನದಲ್ಲಿ ರವಿವಾರ ನಡೆದ ವಿರಾಟ್ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಲವ್ ಜಿಹಾದ್ ಮಾಡುವವರು, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜೊತೆ ವ್ಯಾಪಾರ ಬೇಡ.

ಪೊಲೀಸ್ ಠಾಣೆ ಸುಟ್ಟು ಹಾಕೋರು, ಸೈನಿಕರ ಮೇಲೆ ಕಲ್ಲೆಸೆವರ ಜೊತೆ ವ್ಯಾಪಾರ ನಿಲ್ಲಿಸುವಂತೆ ಕರೆ ನೀಡಿದರು.

ಆರೆಸ್ಸೆಸ್, ಬಜರಂಗದಳ, ಶ್ರೀರಾಮಸೇನೆ ಇರಬಹುದು.‌ ಯಾವುದೇ ಹಿಂದೂ ಸಂಘಟನೆ ಇದ್ದರೂ ತನು ಮನ ಧನದಿಂದ ಬಲಗೊಳಿಸಬೇಕು‌. ದೇವಸ್ಥಾನಗಳಿಗೆ, ಮಠಾಧಿಪತಿಗಳಿಗೆ ದುಡ್ಡು ಹಾಕುವುದನ್ನು ನಿಲ್ಲಿಸಿ.‌ ಹಿಂದೂಪರ ಕಾರ್ಯಕರ್ತರಿಗೆ ಸಹಾಯ ಮಾಡಿ. ಸ್ವದೇಶಿ ವಸ್ತುಗಳನ್ನೇ ಖರೀದಿ ಮಾಡಿ, ಮಾಲ್‌ಗಳಿಗೆ ಹೋಗಬೇಡಿ. ಚೀನ ವಸ್ತು ಖರೀದಿ ಮಾಡಬೇಡಿ, ವಿದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಖರೀದಿ ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ ಎನ್ನಬೇಕು ಎಂದರು.

ಶಸ್ತ್ರಪೂಜೆ ಆಗಬೇಕು ಮನೆಯಲ್ಲಿ ಶಸ್ತ್ರ ಇಡಬೇಕು.‌ ದೇಶದ ಉಳಿವಿಗಾಗಿ, ನಮ್ಮ ಹೆಣ್ಣು ಮಕ್ಕಳು ತಂದೆ ತಾಯಿ ಉಳಿಯಲು ಶಸ್ತ್ರ ಪೂಜೆ ಆಗಬೇಕು. ಆಯುಧ ಪೂಜೆ ಎಂದರೆ ಟ್ರ್ಯಾಕ್ಟರ್ ಸೇರಿ ವಾಹನಗಳು ಅಲ್ಲ. ತಲ್ವಾರ್, ಮಚ್ಚು, ಚಾಕು, ಕುಡಗೋಲು ಇಟ್ಟು ಪೂಜೆ ಮಾಡಬೇಕು ಎಂದು ಕರೆ ನೀಡಿದರು.


Spread the love

About Laxminews 24x7

Check Also

4110 ಪೊಲೀಸ್ ಹುದ್ದೆ ಸೇರಿ ಗೃಹ ಇಲಾಖೆಯ 8176 ಹುದ್ದೆಗಳ ನೇರ ನೇಮಕಾತಿಗೆ ಚಾಲನೆ

Spread the loveಬೆಂಗಳೂರು: ಗೃಹ ಇಲಾಖೆಯಲ್ಲಿ ಖಾಲಿ ಇರುವ 8176 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ