ಬೆಂಗಳೂರು: ಕಾರು ಸ್ಟಾರ್ಟ್ ಮಾಡುವ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಬಿಇಎಲ್ ರಸ್ತೆಯಲ್ಲಿ ನಡೆದಿದೆ.ನಂದಿನಿ ರಾವ್ ಮೃತಪಟ್ಟ ಮಹಿಳೆ. ಇಂದು ಸಂಜೆ ನಂದಿನಿ ರಾವ್ ಡೋರ್ ಓಪನ್ ಮಾಡಿ ಹೊರಗಡೆಯಿಂದ ಟೊಯೊಟಾ ಕೊರೊಲಾ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ.
ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ರಿವರ್ಸ್ ಗೇರ್‌ನಲ್ಲಿದ್ದ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರಿನ ಡೋರ್ ಜೊತೆ ಅವರು ಮರಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಿ ನಂದಿನಿ ರಾವ್ ಸಾವನ್ನಪ್ಪಿದ್ದರು.
ಶಾಕಿಂಗ್ ಘಟನೆ ಎದುರಗಡೆಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Laxmi News 24×7