ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಿಂದ ಪಾರಿಶ್ವಾಡ ಖಾನಾಪುರ ಗೊವಾ ಸಂಪಕ೯ ಕಲ್ಪಿಸುವ ಲೊಕೂಪಯೂಗಿ ಇಲಾಖೆಗೆ ಬರುವ ರಸ್ತೆ ಮಂಜೂರಾಗಿದ್ದು ಎಂಜಿನಿಯರ್ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಯಾವುದೇ ಮುನ್ಸೂಚನೆ ಫಲಕ ಇಲ್ಲದೆ ತುಂಬಾ ತಗ್ಗು ಗುಂಡಿಗಳಿಂದ ತುಂಬಿದ್ದು ವಾಹನ ಸವಾರರು ಹಾಗೂ ರೈತರು ಕಾಖಾ೯ನೆಗೆ ಕಬ್ಬು ತುಂಬಿದ ವಾಹನಗಳನ್ನು ಸಾಗಿಸಲು ಕೈಯಲ್ಲಿ ಜೀವ ಹಿಡಿದು ಹರ ಸಾಹಸ ಪಡಬೇಕಾಗಿದೆ.
ವಾಹನ ಸವಾರರು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಸಾಗುವಂತಾಗಿದೆ ಚರಂಡಿ ನಿರು ರಸ್ತೆ ಮೇಲೆ ಹರಿಯುತ್ತಿರುವದರಿಂದ ತೆಗ್ಗುಗಳು ಸಂಪೂರ್ಣ ಜಲಾವೃತ ಆಗಿದ್ದರಿಂದ ತೆಗ್ಗಿನ ಆಳ ಗೊತ್ತಾಗದೆ ದ್ವೀಚಕ್ರ ವಾಹನ ಸವಾರರು ಇಲ್ಲಿ ಬಿದ್ದಿರುವ ಉದಾಹರಣೆ ಇವೇ.
ಸ್ಥಳಿಯರಾದ ಸಮಾಜ ಸೇವಕ ರಾಜಶೇಖರ ಹಿಂಡಲಗಿ ಆಕ್ರೋಶ ವ್ಯಕ್ತಪಡಿಸಿದರು ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ಸಿಗುವದಾ ಎಂದು ಕಾದು ನೊಡಬೇಕಾಗಿದೆ.
ಈ ಸಂದರ್ಭದಲ್ಲಿ ವಾಹನ ಚಾಲಕರಾದ ರಾಘವೇಂದ್ರ ಛಲವಾದಿ ಸ್ಥಳೀಯರಾದ ಪ್ರಾಣೇಶ ಕೊಡ್ಲಿ,ರೈತ ಮುಖಂಡರಾದ ಶಂಕರ ಗಡಾದ,ಶಿವಪ್ಪ ಸವನೂರ ಬಸವಾರಜ ಉಪಸ್ಥಿತರಿದ್ದರು