ಸಾಂಬ್ರಾ: ಸಮೀಪದ ಮಾರೀಹಾಳ ಗ್ರಾಮದ ರೈತರೇ ಒಂದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಮುಂದಾದರು. ರೈತರೇ ಸೇರಿಕೊಂಡಿ ಜೆಸಿಬಿಗೆ ಪೂಜೆ ಸಲ್ಲಿಸಿ ಕಾಮಗಾರಿಗೂ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ಧರ್ಮೋಜಿ ಅವರು ಜೆಸಿಬಿ ಪೂಜೆ ಮಾಡುವ ಮೂಲಕ ರಸ್ತೆ ನಿರ್ಮಾಣ ಆರಂಭಿಸಿದರು.
ರೈತರಾದ ರಫೀಕ್ ಮುಲ್ಲಾ, ಅಪ್ಪಣ್ಣ ಕಲ್ಲನ್ನವರ, ಗಣಪತಿ ಕಲ್ಲನ್ನವರ, ದಸ್ತಗೀರ ಮುಲ್ಲಾ, ಗುರುನಾಥ ಅಕ್ಕತಂಗೇರಹಾಳ, ಚಂದ್ರಹಾಸ ಅಕ್ಕತಂಗೇರಹಾಳ, ಗುಲ್ಲು ಮುಲ್ಲಾ, ರಮೇಶ ಯಲ್ಲಪ್ಪನವರ ಸೇರಿದಂತೆ ಇತರರು ಇದ್ದರು.