ಸಾಧನೆಗೈದ ಕಾನಸ್ಟೆಬಲ್ ಪುತ್ರಿ ಹಾಗೂ ಆಕೆಯ ತಂದೆ – ತಾಯಿಯನ್ನು ಕಚೇರಿಗೆ ಕರೆಸಿ ಸೋಮವಾರ ಸನ್ಮಾನಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಆದರ್ಶ ಕೆಲಸ ಮಾಡಿದ್ದಾರೆ.
ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಲಗಮಣ್ಣಾ ನಾಯಕ್ ಮತ್ತು ಶೀಲಾ ಲಗಮಣ್ಣ ನಾಯಕ ರವರ ಮಗಳು ಸ್ನೇಹಾ ನಾಯಕ್ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ ಆಯ್ಕೆಯಾಗಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಸತ್ಕರಿಸಲಾಯಿತು. ಅವರ ಭವಿಷ್ಯ ಉಜ್ವಲವಾಗಲಿ ಎಂದು ಸಂಜೀವ ಪಾಟೀಲ ಹಾರೈಸಿದರು.
Laxmi News 24×7