ಬೆಳಗಾವಿ: ‘ಮಹಾರಾಷ್ಟ್ರವೂ ಸೇರಿದಂತೆ ಹೊರನಾಡ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸೂಕ್ತ ಚರ್ಚೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಜತ್ತ ಕನ್ನಡಿಗರ ನಿಯೋಗದೊಂದಿಗೆ ಮಾತನಾಡಿದ ಅವರು, ‘ಹೊರನಾಡ ಕನ್ನಡಿಗರ ಮೀಸಲಾತಿ ಸಂಬಂಧ ಚರ್ಚಿಸಲು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಬೆಳಗಾವಿಗೆ ಕಳಿಸಲಾಗುವುದು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತ್ತು ಹೋರಾಟಗಾರ ಅಶೋಕ ಚಂದರಗಿ ಸಹಿತ ಜತ್ತ, ಅಕ್ಕಲಕೋಟೆ ಕನ್ನಡಿಗರೊಂದಿಗೆ ಸಭೆ ನಡೆಸಿ, ಸಭೆಯಲ್ಲಿ ಕೈಕೊಳ್ಳುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿರುತ್ತದೆ’ ಎಂದರು.
ಮುಖಂಡರಾದ ರಮೇಶ ಸೊಂಟಕ್ಕಿ, ಮೈನೋದ್ದೀನ್ ಮಕಾನದಾರ, ಶಂಕರ ಬಾಗೇವಾಡಿ, ರಾಜು ಸಂಕಪಾಳ, ಸಾಗರ್ ಬೋರಗಲ್ಲ, ವೀರೇಂದ್ರ ಗೋಬರಿ, ನಿತಿನ್ ಮುಕರಿ, ಶಿವನಗೌಡ ಪಾಟೀಲ ಜತ್ತ ಕನ್ನಡಿಗರ ಮುಖಂಡರಾದ ರಾಜೇಂದ್ರ ಬಿರಾದಾರ, ಅಮಗೊಂಡ ಪಾಂಢರೆ, ಧರ್ಮರಾಯ ಸುಸಲಾದ, ವಿಠ್ಠಲ ಸೊನಕನಳ್ಳಿ, ಚಂದ್ರಶೇಖರ ಕಾರ್ಕಲ್ ನಿಯೋಗದಲ್ಲಿ ಇದ್ದರು.