Breaking News
Home / Uncategorized / 25 ವರ್ಷದ ಬಳಿಕ ಎಸ್ಸೆಸ್ಸೆಲ್ಸಿ ಶಿಕ್ಷಕರನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

25 ವರ್ಷದ ಬಳಿಕ ಎಸ್ಸೆಸ್ಸೆಲ್ಸಿ ಶಿಕ್ಷಕರನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

Spread the love

ಬೆಳಗಾವಿ : ಮನುಷ್ಯ ಭೂಮಿಯ ಮೇಲೆ ಹುಟ್ಟಿದ ಮೇಲೆ ತಂದೆ-ತಾಯಿಗಳು, ಗುರು, ಸಮಾಜದ ಋಣಗಳನ್ನು ತೀರಿಸಬೇಕು ಎಂದು ಕೆಆರ್‌ಇ ಸಂಸ್ಥೆಯ ಹೈಸ್ಕೂಲ್ ನಿವೃತ್ತಿ ಶಿಕ್ಷಕರಾದ ಸಿ.ಎಂ ಹಿರೇಮಠ್ ಅವರು ಹೇಳಿದರು.

ಭಾನುವಾರ(ಡಿ.25) ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ವಿಶ್ವನಾಥ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಕೆ ಆರ್ ಇ ಎಸ್ ಸಂಸ್ಥೆಯ ಹೈಸ್ಕೂಲ್‌ನ 1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ 25ನೇ ಬೆಳ್ಳಿ ಹಬ್ಬ, ಗುರುವಂದನಾ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಗಾಟಿಸಿ, ಮಾತನಾಡಿದರು.

 

”ಗುರು ತನ್ನ ಉಸಿರಿರುವರೆಗೂ ಬದುಕಿ ಬಾಳಲು ಸಾಧ್ಯವಾಗಿರುವಂಥ ವಿದ್ಯೆಯನ್ನು ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರದ ಬೀಜವನ್ನು ಬಿತ್ತಿ ಬೆಳೆಸಿ, ಬದುಕಿಗೆ ದಾರಿ ದೀಪ ತೋರಿ ಕಲ್ಲಿನಂತಿರುವ ಮಕ್ಕಳನ್ನು, ಕಟೆದು ಸುಂದರ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಅಜ್ಞಾನಿಗಳನ್ನು, ಸುಜ್ಞಾನಿಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಇಂಗ್ಲಿಷ್ ಶಿಕ್ಷಕರಾಗಿದ್ದ ಐ ಎಂ ಹಿರೇಮಠ್, ಹಾಲಿ ಉಪಪ್ರಾಂಶುಪಾಲರಾದ ಎ.ಎಂ ಹುಲ್ಲೇನ್ನವರ್ ಮಾತನಾಡಿ 1996-97ನೇ ಬ್ಯಾಚ್ ಹೇಗೆ ವಿಶಿಷ್ಟವಾಗಿತ್ತು ಎಂದು ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಉಪಪ್ರಾಂಶುಪಾಲರಾದ ಎಸ್‌ ಐ ಹೊನ್ನಳ್ಳಿ ಅವರು, ವಿದ್ಯೆ ಧಾರೆ ಎರೆದ ಶಿಕ್ಷಕರನ್ನು 25 ವರ್ಷದ ಬಳಿಕ ಒಂದೆಡೆ ಸೇರಿಸಿ, ಅವರನ್ನು ಸತ್ಕರಿಸುತ್ತಿರುವುದು ಅಪೂರ್ವ ನಡೆ ಎಂದು ಬಣ್ಣಿಸಿದರು.

ಹಳೆಯ ವಿದ್ಯಾರ್ಥಿಗಳಾದ ಬದರಿ ಉಮರ್ಜಿ, ಸೀತಾ ಕಟ್ಟಿ, ಶ್ರೀಕಾಂತ್ ಕುಡಚಿ, ಗುರುಪಾದ ಡೂಗನವರ, ರಾಜು ಕಟ್ಟಿ, ಮಧು ಬೋಗಾರ, ರಾಜು ಕತ್ತಿ, ಕವಿತಾ ಜಾಧವ್, ಶಾಂತಾ ದಾನೋಳ್ಳಿ, ವಂದನಾ ಗಾಣಿಗೇರ, ಜ್ಯೋತಿ ಅಪರಾಜ, ರಮೇಶ್ ಕಾರೆ ಅವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಭೇಟಿ, ನೀಡಿ ತಮ್ಮ ಹೈಸ್ಕೂಲ್ ದಿನಗಳನ್ನು ಮೆಲುಕು ಹಾಕಿದರು. ಆಗ ಮಾಡುತ್ತಿದ್ದ ಕೀಟಲೆ, ಕುಚೇಷ್ಟೆಗಳನ್ನು ಮತ್ತೆ ಮರುಸೃಷ್ಟಿಸಿ ಖುಷಿಪಟ್ಟರು. ಇದೊಂದು ಅಪೂರ್ವ ಸ್ನೇಹ ಸಮ್ಮಿಲನದ ಕಾರ್ಯಕ್ರಮವೇ ಆಗಿತ್ತು.

 

ಹಳೆಯ ವಿದ್ಯಾರ್ಥಿಗಳಾದ ಪತ್ರಕರ್ತ ಮಲ್ಲಿಕಾರ್ಜುನ ತಿಪ್ಪಾರ ಸ್ವಾಗತಿಸಿದರು. ವೈದೇಹಿ ಉಮರ್ಜಿ ಪ್ರಾರ್ಥಿಸಿದರು. ಶಿಕ್ಷಕ ಶಿವಶಂಕರ್ ಕುಂಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ್ ಲಿಂಬಿಕಾಯಿ ವಂದನಾರ್ಪಣೆ ಮಾಡಿದರು. ಶಿಕ್ಷಕ ವಿಜಯ್ ಹುದ್ದಾರ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು


Spread the love

About Laxminews 24x7

Check Also

ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

Spread the love ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ