Breaking News
Home / ಜಿಲ್ಲೆ / ಬೆಳಗಾವಿ / ಮೋಲಾಸಿಸ್ ಹಗರಣ ರಾಜ್ಯದಲ್ಲಿ ನಡೆದಿದೆ: ಬಿ.ಕೆ.ಹರಿಪ್ರಸಾದ್

ಮೋಲಾಸಿಸ್ ಹಗರಣ ರಾಜ್ಯದಲ್ಲಿ ನಡೆದಿದೆ: ಬಿ.ಕೆ.ಹರಿಪ್ರಸಾದ್

Spread the love

ರಾಜ್ಯದಲ್ಲಿ ಮೊಲಾಸಿಸ್ ಹಗರಣ ನಡೆದಿದೆ ಎಂದು ಬಿ ಕೆ ಹರಿಪ್ರಸಾದ ಹೇಳಿದರು.ಅವರು ಸುವರ್ಣಸೌಧ ಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬಿಜೆಪಿಯ ಸಿ ಟಿ ರವಿ ನನ್ನ ವಿರುದ್ದ ಇಲ್ಲ ಸಲ್ಲದ ಮಾತುಗಳಾಡುತ್ತಾರೆ ಭ್ರಷ್ಟಾಚಾರಗಳನ್ನು ಹೋರ ತಂದರೆ ಪೋಲಿಸರ ಮುಖಾಂತರ ಅರೇಷ್ಟ ಮಾಡ್ತಾರೆ. ಕೆಂದ್ರದಲ್ಲಿ ಇ ಡಿ, ಐ ಟಿ ಬಳೆಸಿದರೆ ರಾಜ್ಯದಲ್ಲಿ ಪೋಲಿಸರ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಭ್ರಷ್ಟಾಚಾರ ವಿರುಧ್ಧ ನಾವು ಚರ್ಚೆಗೆ ಸಿದ್ದ ದಾಖಲೆಗಳನ್ನು ನಾವು ಸಭೆ ಮುಂದೆ ಇಡ್ತೀವಿ ರಾಜ್ಯದಲ್ಲಿ ಮೊಲಾಸಿಸ್ ಹಗರಣ ನಡೆದಿದೆ ಮೂರು ಲಕ್ಷ ಟನ್ ನಷ್ಟ ಮೊಲಾಸಿಸ್ ಅನ್ನು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾಗ್ತಿದೆ ಇದರಲ್ಲಿ ಭಾರೀ ಹಗರಣ ನಡೆಸಿದೆ.

ಇದನ್ನು ನಾವು ಬಹಿರಂಗ ಗೊಳಿಸ್ತೀವಿ. ಇದರಲ್ಲಿ ಕಳಪೆ ಕಳ್ಳಬಟ್ಟಿ ಸಾರಾಯಿ ಮಾಡ್ತಾರೆ. ಸಿಟಿ ರವಿಯವರುವ ನನಗೆ ಹೆಂಡ ಮಾರುವವರು ಕೊಲೆಗಟುಕರು ಎಂದಿದ್ದಾರೆ. ಇವರ ಬಿಎಸ್ ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದ್ರು ಸಾವಿರಾರು ಜನ ರಸ್ತೆ ಪಾಲಾದ್ರು ಇವಾಗ ಹೆಂಡದ ಮೇಲೆ ಕಣ್ಣಿದೆ, 24 ಸಾವಿರ ಕೋಟಿ ಹೆಂಡದ ಮೂಲಕ ಬರುತ್ತದೆ . ಗುಜರಾತ್ ಮಾದರಿಯಲ್ಲಿ ಪಾನ ನಿಷೇಧ ಮಾಡಿ.ಆ ಕಸುಬು ನಡೆಸುತ್ತಿರುವವರನ್ನ ಕೊಲೆ ಗಟುಕರು ಎಂದು ಹೇಳೋದು ಸರಿಯಲ್ಲ. ಸಿಟಿ ರವಿ ಅವರಿಗೆ ಎಳ್ಳಾಮವಾಸ್ಯೆಯಂದು ಸಾರಾಯಿ, ಹೆಂಡ ಸಿಕ್ಕಿರಲಿಲ್ಲ ಅದ್ಕೆ ಕಳ್ಳಬಟ್ಟಿ ಕುಡಿದು ಮಾತಾಡಿದ್ದಾರೆ, ನನ್ನ ಹಿನ್ನೆಲೆ ಇಡೀ ದೇಶಕ್ಕೆ ಗೊತ್ತಿದೆ. ಇವರು ಸಣ್ಣ ಹುಡುಗರಿದ್ದಾಗಲೇ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆ ನೋಡಿದ್ದೇನೆ.

ದೇಶದಲ್ಲಿ ಅವರದ್ದೇ ಸರ್ಕಾರ ಇದೆ. ಒಂದಾದರೂ ಎಫ್ ಐ ಆರ್ ನನ್ನ ವಿರುದ್ಧ ತೋರಿಸಲಿ ನಾನು ರಾಜಕೀಯ ಬಿಡ್ತೀನಿ.

ಇಲ್ಲ ಅವರ ಮೇಲೆ ಎಷ್ಟಿದೆ ಎಫ್ ಐ ಆರ್ ಇದೆ ನೋಡಿ. ಶಾಕರಾದ ಮೇಲೆ ಎಷ್ಟು ಸಂಪಾದನೆ ಮಾಡಿದ್ದಾರೆ, ದನದ ಮಾಂಸ ಮಾರಾಟಗಾರರಿಂದ ಎಷ್ಟು ಹಪ್ತಾ ವಸೂಲಿ ಮಾಡಿದ್ದಾರೆ, ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ, ಇಷ್ಟೊಂದು ಹಣ ಶಾಸಕರಿಗೆ ಮಾಡೋದಕ್ಕೆ ಸಾಧ್ಯ ಇಲ್ಲ. ನನ್ನ ಸಂಪಾದನೆ ಹಾಗೂ ಅವರ ಸಂಪಾದನೆ ಬಗ್ಗೆ ತನಿಖೆ ಆಗಲಿ ಎಂದು ಬಹಿರಂಗ ಚರ್ಚೆಗೆ ಆಹ್ವಾನ ಕೊಟ್ಟ ಬಿ ಕೆ .ಹರಿಪ್ರಸಾದ್.ಸಿಟಿ ರವಿ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬರಬೇಕಾದರೆ ಯಾರದರೂ ಲಿಫ್ಟ್ ಕೊಡಬೇಕಿತ್ತು ಆದರೆ ಈಗ ಐಶಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆ: ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Spread the love ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ 22ನೇ ಅವಧಿಗೆ ನಾಲ್ಕು ಸ್ಥಾಯಿ ಸಮಿತಿಗಳ 28 ಸದಸ್ಯ ಸ್ಥಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ