Breaking News

ಅಥಣಿ ಪುರಸಭೆ ಸದಸ್ಯರಿಂದ ಪ್ರತಿಭಟಣೆ

Spread the love

ಅಥಣಿ ಪುರಸಭೆ ಚುನಾವಣೆ ಮುಗಿದು ಇಂದಿಗೆ ವರ್ಷವಾಯ್ತು, ಇದುವರೆಗೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ ಇದರಿಂದ ಪಟ್ಟಣದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ. ಸರಕಾರ ಜನತಾ ಜನಾರ್ಧನರಿಗೆ ಮೋಸಮಾಡುತ್ತಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಣೆ ಮಾಡಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಬೆಳಿಗ್ಗೆ ಪ್ರತಿಭಟಣೆ ಮಾಡುತ್ತಾ ಮಾತನಾಡಿದ ಸದಸ್ಯ ರಾವಸಾಬ ಐಹೊಳೆ ಒಂದು ವರ್ಷವಾಯ್ತು ನಾವು ಆಯ್ಕೆಗೊಂಡು ಇದುವರೆಗೂ ಅಧಿಕಾರ ಸಿಕ್ಕಿಲ್ಲ, ಇದರಿಂದ ವಾರ್ಡಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯವಾಗಿಲ್ಲ, ಯಾವ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಹಾಗಾಗಿ ಮತಹಾಕಿದ ಜನತೆ ನಮ್ಮನ್ನು ಕೇಳುತ್ತಿದ್ದಾರೆ. ಸರಕಾರವೇ ಈ‌ ಎಲ್ಲ ಸಮಸ್ಯೆಗಳಿಗೆ ನೇರಹೊಣೆ. ನಮ್ಮ ಚುನಾಯಿತ ಪ್ರತನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಮುಂದುವರೆದಿದ್ದು ಕೂಡಲೇ ಅಧಿಕಾರ ಹಸ್ತಾಂತರವಾಗಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ