ನಮ್ಮ ಯುವ ಜನಾಂಗವು ರಾಷ್ಟ್ರದ ಸಂಪತ್ತಾಗಿದ್ದು ದೇಶದ ಸಂಸ್ಕೃತಿ ಪರಂಪರೆ ಹಾಗೂ ಪರಿಸರವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಅದನ್ನು ಪೋಷಿಸಿ ಬೆಳೆಸುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಎನ್ ಸಿಸಿಯ ಪ್ರಮುಖ ಧ್ಯೇಯವಾಗಿದೆ ಎಂದು ಬೆಳಗಾವಿಯೇ ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ಎಸ್ ಶ್ರೀನಿವಾಸ ಹೇಳಿದರು.
ಅವರು ಬೆಳಗಾವಿಯ ಜಾದವ್ ನಗರದಲ್ಲಿ ಬೆಳಗಾವಿ ಎನ್ ಸಿ ಸಿ ಗ್ರೂಪ್ ಅಡಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಟ್ರ್ಯಾಕಿಂಗ್ ( ಚಾರಣ) ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 15 ಡಿಸೆಂಬರ್ ದಿಂದ 22, ಡಿಸೆಂಬರ್ 2022 ರವರೆಗೆ ಜರುಗುತ್ತಿರುವ ಈ ಶಿಬಿರದಲ್ಲಿ ಯುವಕರಲ್ಲಿ ಸಾಹಸ ಪ್ರವೃತ್ತಿಯನ್ನು ಮೂಡಿಸಲಿದೆ.
ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವುದು ಹಾಗೂ ಪರಿಸರದ ಕಾಳಜಿಯ ಬಗ್ಗೆ ಜಾಗೃತಿಯನ್ನು ಹುಟ್ಟು ಹಾಕುವುದು ಈ ಶಿಬಿರದ ಉದ್ದೇಶವಾಗಿದೆ.ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲಿದ್ದಾರೆ. ಸೌಜ ನ್ಯತೆಗಳನ್ನು ಸಮಯ ಪಾಲನೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಹೇಳಿದರು. ಮುಂದುವರಿದು ಮಾತನಾಡಿ ನಾವು ಪ್ರಕೃತಿಯ ಭಾಗವಾಗಿದ್ದು ಅಂತಹ ಪ್ರಕೃತಿಯನ್ನು ಕಾಪಾಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯವಾಗಿದೆ. ಪ್ರಕೃತಿಯೊಂದಿಗೆ ನಾವು ಬೆರೆಯಬೇಕು. ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಪರಿಸರದ ಜಾಗೃತಿಯನ್ನು ಸಮಾಜಕ್ಕೆ ಮುಟ್ಟಿಸಬೇಕೆಂದು ಹೇಳಿದರು.