ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದಾಗಿದ್ದು, ಆದ್ರೆ ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ವಕೀಲರಿಗೆ ಭದ್ರತೆಯನ್ನು ಒದಗಿಸುವ ಕಾನೂನನ್ನು ರಾಜ್ಯದಲ್ಲಿ ತರುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಚಿಕ್ಕೋಡಿ ತಾಲ್ಲೂಕು ವಕೀಲರ ಸಂಘದಿಂದ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿಕ್ಕೋಡಿ ತಾಲ್ಲೂಕು ವಕೀಲರ ಸಂಘದ ಕಚೇರಿಯಿಂದ ಮಿನಿ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ಕೈಗೊಂಡ ವಕೀಲರು ಕೆಲ ಕಾಲ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ನಂತರದಲ್ಲಿ ಚಿಕ್ಕೋಡಿ ಗ್ರೇಡ್ ಟು ತಹಶೀಲ್ದಾರ ದಿಲಾವರ್ ಜಮಾದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಚಿಕ್ಕೋಡಿ ತಾಲ್ಲೂಕು ಬಾರ್ ಅಸೋಶಿಯೇಷನ್ ಅಧ್ಯಕ್ಷ ನಾಗೇಶ ಕಿವಡ ಅವರು ಮಾತನಾಡುತ್ತಾ, ” ರಾಜ್ಯದಲ್ಲಿ ವಕೀಲರಿಗೆ ಭದ್ರತೆ ಒದಗಿಸುವ ಕಾನೂನನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ 29 ರವರೆಗೆ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರುವಂತೆ ರಾಜ್ಯದ ವಕೀಲರೆಲ್ಲರೂ ಸೇರಿ ಬೃಹತ್ ಹೋರಾಟ ನಡೆಸುವ ನಿರ್ಧಾರ ಮಾಡಿದ್ದಾಗಿ ಹೇಳಿದರು.
 Laxmi News 24×7
Laxmi News 24×7
				 
		 
						
					 
						
					 
						
					