Breaking News

‘ಕ್ರಾಂತಿ’ ವಿರುದ್ಧ ಶುರು ಬಾಯ್‌ಕಾಟ್ ಟ್ರೆಂಡ್!

Spread the love

ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಒಂದೆಡೆ ಹಾಡುಗಳನ್ನು ಬಿಡುಗಡೆಗೊಳಿಸುತ್ತಾ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸ್ವತಃ ಚಾಲೆಂಜಿಂಗ್ ದರ್ಶನ್ ಅವರೇ ಸಂದರ್ಶನಗಳಲ್ಲಿ ಪಾಲ್ಗೊಂಡು ಚಿತ್ರದ ಪ್ರಚಾರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಹೀಗೆ ಸಂದರ್ಶನಗಳಲ್ಲಿ ಭಾಗವಹಿಸುತ್ತಿರುವ ದರ್ಶನ್ ಅವರು ಕೆಲ ಸಂದರ್ಶನಗಳಲ್ಲಿ ನೀಡಿದ ಒಂದು ನಿರ್ದಿಷ್ಟ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಎದುರಿಸುತ್ತಿದೆ.

ಹೌದು, ಚಿತ್ರರಂಗದಲ್ಲಿ ನಿರ್ಮಾಪಕರು ಸಿಗುವುದು ಕಷ್ಟ, ಅಂತಹ ಅವಕಾಶ ಸಿಕ್ಕಾಗ ಬಿಡಬಾರದು ಎಂಬುದನ್ನು ಹೇಳಲು ಅದೃಷ್ಟ ದೇವತೆ ಹೆಸರನ್ನು ಬಳಸಿದ ದರ್ಶನ್ “ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು.

ಬಟ್ಟೆ ಕೊಟ್ರೆ ತಾನೇ ಅವಳು ಬೇರೆಯವರ ಮನೆಗೆ ಹೋಗ್ತಾಳೆ?” ಎಂದು ಹೇಳಿಕೆಯನ್ನು ನೀಡಿದ್ದಾರೆ.

 

ಎರಡು ಯುಟ್ಯೂಬ್ ಚಾನೆಲ್‌ಗಳಲ್ಲಿ ನಟ ದರ್ಶನ್ ಈ ರೀತಿಯ ಹೇಳಿಕೆಯನ್ನು ನೀಡಿದ್ದು ಸದ್ಯ ಇದು ವಿವಾದದ ರೂಪ ಪಡೆದುಕೊಂಡಿದೆ. ಹಲವಾರು ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದರೆ, ದರ್ಶನ್ ಅಭಿಮಾನಿಗಳು ಮಾತ್ರ ನಮ್ಮ ನಟ ಈ ಹೇಳಿಕೆ ನೀಡಿರುವುದು ನಿರ್ಮಾಪಕರ ಬಗ್ಗೆ ಮಾತನಾಡುವಾಗ ಹಾಗೂ ಅದೃಷ್ಟದ ಬಗ್ಗೆಯೇ ಹೊರತು ದೇವರಿಗೆ ಇಲ್ಲಿ ಅವಮಾನವಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಹಿಂದೂ ಪರ ಹೋರಾಟಗಾರರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಯನ್ನು ಖಂಡಿಸಿದ್ದು, ಕ್ರಾಂತಿ ಚಿತ್ರವನ್ನು ಬಾಯ್‌ಕಾಟ್ ಮಾಡೋಣ ಎಂದು ಟ್ರೆಂಡ್ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ