ಕಾಂಗ್ರೆಸ್ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಜನವರಿ 8 2023 ರಂದು ಹಮ್ಮಿಕೊಳ್ಳಲಾದ ದಲಿತ ಸಮುದಾಯಗಳ ಐಕ್ಯತಾ ಸಮಾವೇಶದ ಬಗ್ಗೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾಹಿತಿ ನೀಡಿದರು.
ಮೀಸಲಾತಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು. ಇದರ ರಾಜಕೀಯ ಲಾಭಪಡೆಯಲು ಬಿಜೆಪಿ ಮುಂದಾಗಿದೆ.ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯವನ್ನು ಬಿಜೆಪಿ ಒಡೆದಾಳಲು ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ.
ಮೀಸಲಾತಿಗೆ ಕೇಂದ್ರ ಸರ್ಕಾರ ಕಾನೂನಿನ ಚೌಕಟ್ಟು ನೀಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ನಂತರವು ಕಾಂಗ್ರೆಸ್ ದಲಿತರೊಂದಿಗೆ ಇದೆ.
ಹೀಗಾಗಿ ಮತ್ತೆ ದಲಿತರಿಗೆ ಭರವಸೆ ನೀಡುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದ್ದು ಸಮಾವೇಶದಲ್ಲಿ ದಲಿತರ ಹಲವು ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದರು.