Breaking News

ಕರ್ನಾಟಕ ಮಹಾರಾಷ್ಟ್ರಗಳ ನಡುವೆ ಮತ್ತೆ ಆಶಾಂತಿ ಗಲಭೆ

Spread the love

ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟ ಹಿಡಿದು ಕುಣಿದಿದ್ದೇ ನೆಪವಾಗಿ ಕರ್ನಾಟಕ ಮಹಾರಾಷ್ಟ್ರಗಳ ನಡುವೆ ಮತ್ತೆ ಆಶಾಂತಿ ಗಲಭೆ ತಾರಕಕ್ಕೇರಿದೆ.

ಕನ್ನಡ ವಿದ್ಯಾರ್ಥಿಯ ಮೇಲೆ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಪುಂಡರ ದಾಳಿ ಆರಂಭವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳನ್ನು ತಢದು ಮಸಿ ಬಳಿಯಲಾಗುತ್ತಿದೆ.

ಭಾರಾಮತಿ ಬಸ್ ನಿಲ್ದಾಣದಲ್ಲಿ ಹಳಿಯಾಳ ಡಿಪೋಗೆ ಸೇರಿದ ಬಸ್ ಗೆ ಕಪ್ಪು ಮಸಿ ಬಳಿಯಲಾಗಿದೆ. ಮಂಗಳವಾರ ಸಂಜೆ ಏಳು ಗಂಟೆ ಸುಮಾರಿಗೆ ಬಂದ ೧೦ ರದ ೧೨ ಜನರ ಗುಂಪು ಈ ಕೃತ್ಯವೆಸಗಿದ್ದಾಗಿ ಬಸ್ ನಿರ್ವಾಹಕ ತಿಳಿಸಿದ್ದಾರೆ.ಮಹಾರಾಷ್ಟ್ರ ನವನಿರ್ಮಾಣ ಸೇನೆ ಕರ್ನಾಟಕದ ಬಸ್ ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದಾರೆ ತಕ್ಷಣವೇ ಪೋಲಿಸರು ರಕ್ಷಣೆ ಕೊಟ್ಟು ಬಸ್ ಗಳನ್ನು ಮರಳಿ ಕಳುಹಿಸಿದ್ದಾರೆ ಎಂದು ಚಾಲಕರು ತಿಳಿಸಿದರು.


Spread the love

About Laxminews 24x7

Check Also

ಧಾರವಾಡದಲ್ಲಿ 54 ಜೂಜಾಟದ ಪ್ರಕರಣಗಳು ದಾಖಲು

Spread the love ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿ ಸಂಗ್ರಹಿಸಿ ಅಕ್ಟೋಬರ್​​ 20 ರಿಂದ 23ರವರೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ