Breaking News

ನೈರುತ್ಯ ರೈಲ್ವೆ:₹4,447 ಕೋಟಿ ಆದಾಯ

Spread the love

ಹುಬ್ಬಳ್ಳಿ: ನೈರುತ್ಯ ರೈಲ್ವೆ ಏಪ್ರಿಲ್‌-ನವೆಂಬರ್‌ ಅವಧಿಯಲ್ಲಿ ₹ 4,447.62 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹ 3,400.83 ಕೋಟಿ ಆದಾಯ ಬಂದಿತ್ತು. ಆದಾಯದಲ್ಲಿ ಶೇ 30.78ರಷ್ಟು ಏರಿಕೆಯಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಯಾಣಿಕರಿಂದ ಬರುವ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 95.57ರಷ್ಟು ಹೆಚ್ಚಳವಾಗಿದೆ. ₹ 1813.58 ಕೋಟಿ ಆದಾಯ ಬಂದಿದೆ. ಹಿಂದಿನ ವರ್ಷ ₹ 927.31 ಕೋಟಿ ಆದಾಯವಿತ್ತು. ಟಿಕೆಟ್‌ ಇಲ್ಲದವರಿಗೆ ವಿಧಿಸುವ ದಂಡದ ಮೂಲಕ ₹ 37.74 ಕೋಟಿ ಆದಾಯ ಬಂದಿದೆ.

ಪಾರ್ಸಲ್‌ ಹಾಗೂ ಲಗೇಜ್‌ದಿಂದ ₹ 93.29 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ₹ 80.20 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ 16.32ರಷ್ಟು ಏರಿಕೆಯಾಗಿದೆ. ಅನುಪ
ಯುಕ್ತ ವಸ್ತುಗಳ (ಸ್ಕ್ರ್ಯಾಪ್‌ ಸೇಲ್‌) ಮಾರಾಟದಿಂದ ₹ 113.43 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ₹ 96.67 ಕೋಟಿಗೆ ಹೋಲಿಸಿದರೆ ಶೇ 17.34ರಷ್ಟು ಏರಿಕೆಯಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ