ಖಾನಾಪೂರ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫೀಜಿಷನ್ ಡಾಕ್ಟರ್ ಸರಳಾ ತಿಪ್ಪನ್ನವರ (ಎಮ್ ಡಿ ಜನರಲ್ ಮೆಡಿಸಿನ್ ) ಅವರು ಕಳೆದ ಒಂದೂವರೆ ವರ್ಷದಿಂದ ಬೆಳಗಾವಿಯ ಬಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೂಲ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಹು ಅನಾನುಕೂಲ ಉಂಟಾಗುತ್ತಿದ್ದು ಇದರಲ್ಲಿ ವಿಶೇಷ ಏನೆಂದರೆ ಅವರು ದಿ16/6/2021 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ ಮತ್ತೆ ಅದೇ ವಾರದಲ್ಲಿ ಅಂದರೆ ಒಂದೇ ದಿನದಲ್ಲಿ ದಿನಾಂಕ 17/6/2021ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಅವರನ್ನು ನಿಯೋಜನೆ ಮೇರೆಗೆ ಬೆಳಗಾವಿಗೆ ಕಳುಹಿಸಿ ಎಂದು ಆದೇಶ ಖಾನಾಪೂರ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಬರುತ್ತದೆ ಅದರಂತೆ ದಿ 24/6/2021ರಂದು ಖಾನಾಪೂರ ಸಾರ್ವಜನಿಕ ಆಸ್ಪತ್ರೆಯಿಂದ ಬಿಡುಗಡೆ ಆಗಿ ಬೆಳಗಾವಿ ಬಿಮ್ಸ್ ನಲ್ಲಿ ಸೇವೆ?
ಕೇವಲ ಒಂದೇ ದಿನದಲ್ಲಿ ಈ ಪ್ರಕ್ರಿಯೆ ನಡೆದುಹೋಗಿದೆ ಅಂದ್ರೆ ಆ ವೈದ್ಯಧಿಕಾರಿಯ ಪ್ರಭಾವ ಎಷ್ಟರಮಟ್ಟಿಗೆ ಮಟ್ಟಿಗೆ ಪ್ರಭಾವ ಭೀರರಬಹುದು ನೋಡಿ ಕೆಲಸದ ಸ್ಥಳ ಖಾನಾಪುರದಲ್ಲಿ ಆದರೆ ಕೆಲಸ ನಿರ್ವಹಣೆ ಮಾಡುವುದು ಬೆಳಗಾವಿಯಲ್ಲಿ ಇಲ್ಲಿನ ರೋಗಿಗಳ ಸ್ಥಿತಿ ಏನು ಎಂಬುವ ಪ್ರಶ್ನೆ ಉದ್ಭವಿಸಿದೆ.ಅಲ್ಲಿಯೇ ವರ್ಗಾವಣೆ ಮಾಡಿಕೊಂಡು ಹೋಗಿದಾದರೆ ಈ ಸ್ಥಳದಲ್ಲಿ ಸರ್ಕಾರದ ಆದೇಶದಂತೆ ಬೇರೆ ಡಾಕ್ಟರ್ ಆದರೂ ಬಂದು ರೋಗಿಗಳಿಗೆ ಸೇವೆ ಸಲ್ಲಿಸಬಹುದಾಗಿತ್ತು ಆದರೆ ಇವರು ಇಲ್ಲಿ ಸೇವೆ ಕೂಡಾ ಮಾಡ್ತಾ ಇಲ್ಲ, ವರ್ಗಾವಣೆ ಕೂಡಾ ಇಲ್ಲದೇ ಈ ಸ್ಥಾನ ಬ್ಲಾಕ್ ಮಾಡಿ ರೋಗಿಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜೀವ್ ನಾಂದ್ರೆ ಅವರಿಗೆ ಕೇಳಿದ್ರೆ ಮೇಲಾಧಿಕಾರಿಗಳ ಆದೇಶದಂತೆ ನಾವು ನಡೆದುಕೊಂಡಿರುತ್ತೇವೇಂದು ಹಾರೈಕೆ ಉತ್ತರ ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದ್ರು .
ಇದರ ಬಗ್ಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ತ್ರೀ ರೋಗ್ ತಜ್ಞರಾದ ಡಾ.ನಾರಾಯಣ ಅವರಿಗೆ ಕೇಳಿದರೆ ನಾವು ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದು ಖಾನಾಪೂರ ತಾಲೂಕಿನಲ್ಲಿ ಹೆಚ್ಚಾಗಿ ಗುಡ್ಡ -ಗಾಡು ಪ್ರದೇಶಗಳಿಂದ ರೋಗಿಗಳು ಬರುತ್ತಾರೆ.ನಾವಂತೂ ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಉಪಚರಿಸುತ್ತೇವೆ..ಇನ್ನೂ ಹೆಚ್ಚಿನ ಚಿಕಿತ್ಸೆಗೆ ಜನರಲ್ ಫೀಜಿಷನ್ ಅವರ ಸಲಹೆ ಕೂಡಾ ಮುಖ್ಯ ಇಂತಹಾ ಸ್ಥಿತಿಯಲ್ಲಿ ಬಹಳ ಅನಾನುಕೂಲವಾಗುತ್ತಿದೆ ಅವರು ಇದ್ರೆ ಇನ್ನೂ ಉತ್ತಮ ಎಂದು ಹೇಳಿದರು.