ಕರ್ನಾಟಕ ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಟ್ಟು ಕರ್ನಾಟಕ ಸೇರುವ ನಿರ್ಧಾರವನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟತಾಲೂಕಿನ ಜನರು ತೆಗೆದುಕೊಂಡಿದ್ದಾರೆ
ಕನ್ನಡಿಗರೇ ಹೆಚ್ಚು ವಾಸ ಮಾಡುತ್ತಿರೋ ಅಕ್ಕಲಕೋಟ್ ತಾಲೂಕಿನ 44 ಕ್ಕೂ ಆಧಿಕ ಗ್ರಾಮಗಳ ಜನರಿಂದ ಕರ್ನಾಟಕ ಸೇರಲು ಗ್ರಾಮಗಳ ಮಂಡಲಗಳಲ್ಲಿ ಕರ್ನಾಟಕ ಸೇರಲು ಠರಾವು ಪಾಸ್ ಮಾಡಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರೋ ಕನ್ನಡಿರು ಮಹಾರಾಷ್ಟ್ರದಿಂದ ನಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಕನ್ನಡಿಗರು ಇರೋ ಭಾಗದಲ್ಲಿ ಮಹರಾಷ್ಟ್ರ ಯಾವುದೇ ಅಭಿವೃದ್ದಿ ಮಾಡಿಲ್ಲಾ, ಹೀಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕೆಂದು ಅಕ್ಕಲಕೋಟೆ ಭಾಗದ ಜನತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.