ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆ ಆಯೋಜನೆ ಸ್ಪೂರ್ತಿ ದಾಯಕವಾಗಿದೆ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಅಭಿಪ್ರಾಯ ಪಟ್ಟರು.
ಬೆಳಗಾವಿ ನಂದಿನಿ ಹಾಲು ಉತ್ಪಾದನಾ ಘಟಕ ಮತ್ತು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ಹುಕ್ಕೇರಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಕೆ ಎಮ್ ಎಫ್ ನಂದಿನಿ ಸೈಕ್ಲಿಂಗ್ ಸ್ಫರ್ದೆಯನ್ನು ಮಾಜಿ ಜಿಲ್ಲಾ ಪಂಚಾಯತ ಪನವ ಕತ್ತಿ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಬಿ ಇ ಓ ಮೋಹನ ದಂಡಿನ ಗ್ರಾಮುಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಲು ಮತ್ತು ಸ್ಪೂರ್ತಿ ತುಂಬಲು ಬೆಳಗಾವಿ ಕೆ ಎಮ್ ಎಫ್ ಹಾಲು ಉತ್ಪಾದಕ ಘಟಕ ವತಿಯಿಂದ ಇಂದು ಹುಕ್ಕೇರಿ ನಗರದಲ್ಲಿ ಆಯೋಜಿಸಿದ ಸೈಕ್ಲಿಂಗ್ ಸ್ಫರ್ದೆ ಯಲ್ಲಿ ತಾಲೂಕಿನ 76 ವಿದ್ಯಾರ್ಥಿಗಳು ಭಾಗವಹಿಸಿ 6 ಜನ ವಿಜೆತರಾಗಿದ್ದಾರೆ ಎಂದರು
ಬೆಳಗಾವಿ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಆರ್ ಎಚ್ ಪೂಜಾರ ಮಾತನಾಡಿ ರಾಜ್ಯದಲ್ಲೆ ಪ್ರಥಮ ಬಾರಿಗೆ ಬೆಳಗಾವಿ KMF ಅದ್ಯಕ್ಷ ವೀವೇಕರಾವ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ಪ್ರೌಢ ಶಾಲೆಯ 8,9,ಮತ್ತು 10 ನೇ ತರಗತಿ ಮಕ್ಕಳಿಗೆ ಸೈಕ್ಲಿಂಗ್ ಸ್ಫರ್ದೆ ಆಯೋಜಿಸುವ ಮೂಲಕ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಅನಕೂಲ ಮಾಡಿಕೋಟ್ಟಿದ್ದಾರೆ ಇದರಂತೆ ಸರ್ಕಾರವು ಸಹ ಈ ರೀತಿ ಪ್ರೌಢ ಶಾಲಾ ಮಟ್ಟದಲ್ಲಿ ಸೈಕ್ಲಿಂಗ್ ಸ್ಫರ್ದೆ ಮಾಡಬೇಕೆಂದು ಆಗ್ರಹಿಸಿದರು.
ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ರಫೀಕ ತಹಸಿಲ್ದಾರ ಮತ್ತು ಪವನ ಕತ್ತಿ ಸಹ ಮ್ಯಾರಥಾನ್ ದಲ್ಲಿ ಭಾಗವಹಿಸಿ ಸೈಕಲ್ ತುಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಕೆ ಎಮ್ ಎಫ್ ನಿರ್ದೆಶಕ ರಾಯಪ್ಪಾ ಡೂಗ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ ಎಸ್ ಪದ್ಮಣ್ಣವರ,ಶಿಕ್ಷಣ ಇಲಾಖೆ ಸಿಬ್ಬಂದಿಗಳಾದ ಎಸ್ ಎಸ್ ಕರಿಗಾರ, ಎಮ್ ಬಿ ಸನದಿ, ಎಮ್ ಎಸ್ ಸದಲಗಿ, ಶಿತಲ್ ಬ್ಯಾಳಿ ಉಪಸ್ಥಿತರಿದ್ದರು.