ಇಂದು ಬೆಳಗಾವಿಗೆ ಆಗಮಿಸಿದ ರೋಟರಿ ಡಿಸ್ಟ್ರಿಕ್ಟ್ ೩೧೩೧ ಅಖಿಲ ಭಾರತ ಕಾರ್ ರ್ಯಾಲಿಯನ್ನು ಬೆಳಗಾವಿ ರೋಟರಿ ಪರಿವಾರದ ವತಿಯಿಂದ ಬರಮಾಡಿಕೊಳ್ಳಲಾಯಿತು.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಳಿ ಡಿಸ್ಟ್ರಿಕ್ಟ್ ಗವರ್ನರ್ ರೋಟೇರಿಯನ್ ವೆಂಕಟೇಶ ದೇಶಪಾಂಡೆ ಮತ್ತು ರೋಟರಿ ಸದಸ್ಯರು ಸ್ವಾಗತಿಸಿದರು.
ಈ ಕಾರ್ ರ್ಯಾಲಿ ನೇತ್ರತ್ವವನ್ನು ಡಾ.ಅನಿಲ ಪರಮಾರ,ಪಿ.ಡಿ.ಜಿ ದೀಪಕ ಪುರೋಹಿತ, ಪಿ.ಡಿ.ಜಿ ರಶ್ಮಿ ಕುಲಕರ್ಣಿ ಅವರು ವಹಿಸಿದ್ದರು. ಒಟ್ಟು ೨೬ ಕಾರುಗಳು ೮೮ ಮಹಿಳೆಯರು ಪಾಲ್ಗೊಂಡಿರುವ ರ್ಯಾಲಿ ಮೂಲಕ ಹೆಣ್ಣುಮಕ್ಕಳ ಸಶಕ್ತೀಕರಣ,ಪ್ಲಾಸ್ಟಿಕ್ ಬಳಕೆ ಮತ್ತು ವ್ಯಸನ ನಿಷೇಧ ಮತ್ತು ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪುಣೆಯಿಂದ ಆರಂಭಗೊಂಡ ರ್ಯಾಲಿ ಸೋಲಾಪುರ ,ವಿಜಯಪುರ ಹಂಪಿ ಬೆಂಗಳೂರು ಮಂಗಳೂರು ಉಡುಪಿ ಗೋವಾ ಬೆಳಗಾವಿ ಮಾರ್ಗವಾಗಿ ಪುಣೆ ತಲುಪಲಿದೆ ಎಂದು ಅನಿಲ ಪರಮಾರ ಮಾಹಿತಿ ನೀಡಿದರು