ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಕೊರಕೊಪ್ಪ ಗ್ರಾಮದಲ್ಲಿ ಲಕ್ಷ್ಮೀದೇವಿ
ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಈ ಅನ್ನ ಸಂತರ್ಪಣೆ ಕಾರ್ಯವು ಜಿಲ್ಲಾದ್ಯಂತ ನಡೆಯುತ್ತಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ಈ ಸೇವೆ ನಿರಂತರವಾಗಿರಲಿ ಎಂದು ಊರಿನ ಹಿರಿಯರು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದಪ್ಪ ಕುರಿ, ಸಿದ್ದಪ್ಪಾ ಪೂಜೇರಿ, ಬಸುನಗೌಡರ್ ಪಾಟೀಲ್, ಸೋಮಗೌಡರ್ ಪಾಟೀಲ್, ಸಿದ್ದನಗೌಡರ್ ಗೌಡರ್,ಬಸಪ್ಪ ಯಕ್ಕಣ್ಣವರ,ಭೀಮಶಿ ಇಟ್ಟಗೌಡರ್, ಪಕೀರಪ್ಪ ಯಕ್ಕಣ್ಣವರ, ಸಿದ್ರಾಮಪ್ಪ ಇಟ್ಟಗೌಡರ್, ಮುಸ್ತಾಕ್ ಅಲಿ ನದಾಫ್, ಮಾಂತೇಶ ಹವಳಕೋಡ್, ಸಿದ್ದಪ್ಪ ಮಹಾಲಿಂಗಪುರ್, ವಿಠ್ಠಲ್ ಕುರಿ, ಮಾರುತಿ ತಳವಾರ್.
ಊರಿನ ರೈತರು, ಹಿರಿಯರು ಮತ್ತು ಅನೇಕ ಉಪಸ್ಥಿತರಿದ್ದರು.
Laxmi News 24×7