ಕಲಬುರಗಿ: ಹತ್ತಿ ಹೊಲದಲ್ಲಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಗಂಡನೇ ಕೊಂದ ಭೀಕರ ಘಟನೆ ಸುರಪುರ ತಾಲೂಕಿನ ಕಾಚಾಪುರದಲ್ಲಿ ಸಂಭವಿಸಿದೆ.
ನಾಡಗೌಡ(36) ಮತ್ತು ಮಲ್ಲಮ್ಮ(30) ಕೊಲೆಯಾದ ದುರ್ದೈವಿಗಳು. ಹತ್ತಿ ಹೊಲದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ಜೋಡಿ ಶವ ನೋಡಿ ಸ್ಥಳೀಯರು ಬೆಚ್ಚಿಬಿದ್ದಾರೆ.
ಕೊಲೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ಪ್ರಿಯಕರನೊಂದಿಗೆ ಹೊಲದಲ್ಲಿದ್ದ ಪತ್ನಿಯನ್ನ ಗಂಡನೇ ಕುಡುಗೋಲಿನಿಂದ ಕೊಚ್ಚಿದ್ದಾನೆ. ಪ್ರಿಯಕರನನ್ನೂ ಅಲ್ಲೇ ಕೊಂದಿದ್ದಾರೆ. ಇಬ್ಬರ ಶವಗಳು ಪಕ್ಕದಲ್ಲೇ ಬಿದ್ದಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೆಂಭಾವಿ ಠಾಣೆ ಪೊಲೀಸರು ಮೃತದೇಹಗಳನ್ನು ಶವಗಾರಕ್ಕೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.