ಕಾಗವಾಡ ತಾಲೂಕಿನ ಶಿರಗುಪ್ಪಿ, ಶೇಡಬಾಳ, ಉಗಾರ, ಮಂಗಸೂಳಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮದ ರೈತರು, ರೈತ ಮುಖಂಡ ಸುರೇಶ್ ಚೌಗುಲೆ ಇವರ ನೇತೃತ್ವದಲ್ಲಿ, ಮಾಜಿ ಶಾಸಕ ರಾಜು ಕಾಗೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಗುರುವಾರ ರಂದು ಉಗಾರ ಹೆಸ್ಕಾಂ ಇಲಾಖೆಯ ಕಚೇರಿ ಎದರು ಪ್ರತಿಭಟನೆ ಕೈಗೊಂಡಿದರು.
ಪ್ರತಿದಿನ ರೈತರ ಪಂಪ್ಸೆಟ್‍ಗಳಿಗೆ 6 ಗಂಟೆ ವಿದ್ಯುತ್ ಪೂರೈಸುತಿದಾರೆ. ಇದರಿಂದ ರೈತರ ಬೆಳೆಗಳು ಕಮರಿ ಹೋಗುತ್ತಿವೆ ಇನ್ನುಳಿದ ತಾಲೂಕಗಳಲ್ಲಿ 7 ಗಂಟೆ ವಿದ್ಯುತ ಪೂರೈಕೆ ಮಾಡುತ್ತಿರಿ. ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ 7 ಗಂಟೆ ವಿದ್ಯುತ ಪೂರೈಸಿರಿ ಎಂಬ ಬೇಡಿಕ್ಕೆ ಇಟ್ಟು ಕೊಂಡು ಪ್ರತಿಭಟನೆ ಕೈಗೊಂಡಿದ್ದರು.ಇದನ್ನು ಆಲಿಸಿ ಇಂಧನ ಖಾತೆ ಸಚಿವ ಸುನಿಲ್ ಇವರೊಂದಿಗೆ ಮಾಜಿ ಶಾಸಕ ರಾಜು ಕಾಗೆ ಚರ್ಚಿಸಿದ ಬಳಿಕ ಹೆಸ್ಕಾಂ ಇಲಾಖೆ ಅಧಿಕಾರಿಗಳಾದ ಯಂಕಂಚಿ ಇವರು ಶುಕ್ರವಾರದಿಂದ 7 ಗಂಟೆ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಘೋಷಣೆ ಮಾಡಿ ರೈತರಿಗೆ ಮಾಹಿತಿ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ರೈತ ಮುಖಂಡರಾದ ಸುರೇಶ್ ಚೌಗುಲೆ ಮಾತನಾಡಿ, ರಾಜ್ಯದ ಇಂಧನ ಖಾತೆ ಸಚಿವರು ವಿಧಾನಸಭೆಯಲ್ಲಿ ರಾಜ್ಯದ ರೈತರಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ, ಎಂಬ ಹೇಳಿಕೆ ನೀಡಿದ ದಾಖಲೆಯನ್ನು ಪ್ರದರ್ಶಿಸಿ, ರೈತರಿಗೆ ಇವರಿಗೆ 6 ಗಂಟೆ ವಿದ್ಯುತ್ ಪೂರೈಕೆವಾಗುತ್ತಿದ್ದರಿಂದ ತೊಂದರೆಯಲ್ಲಿದ್ದೇವೆ. ಸಚಿವರು ಹೇಳಿದ ಪ್ರಕಾರ 7 ಗಂಟೆ ವಿದ್ಯುತ್ ಪೂರೈಕೆವಾಗಬೇಕು. ಸಚಿವರು ಹೇಳಿದ್ದು ಸತ್ಯ ಅಥವಾ ಅಧಿಕಾರಿಗಳು ಹೇಳುವುದು ಸತ್ಯ. ಎಂಬ ಪ್ರಶ್ನಿಸಿ ವಿದ್ಯುತ್ ಪೂರೈಕೆಯಲ್ಲಿ ಬದಲಾವಣೆ ಆಗದೆ ಹೋದರೆ ನಾವು ಉಗ್ರವಾದ ಪ್ರತಿಭಟನೆ ಕೈಗೊಳುತ್ತೇವೆ ಎಂದು ಹೇಳಿದರು.