Breaking News

ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಸಿಎಂ ಸುಳಿವು…

Spread the love

ಬೆಳಗಾವಿ-ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರ ಭೇಟಿ ವಿಚಾರವಾಗಿ
ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಸುಳಿವು ನೀಡಿದ್ದಾರೆ.

ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳಿಸಿದ್ದಾರೆ.ಎರಡೂ ರಾಜ್ಯಗಳ ಮಧ್ಯೆ ಈ ರೀತಿ ಪರಿಸ್ಥಿತಿ ಇರುವಾಗ ಅವರು ಬರೋದು ಸೂಕ್ತ ಅಲ್ಲ.
ಬರಬಾರದು ಅನ್ನೋ ಸಂದೇಶ ನಾವು ಈಗಾಗಲೇ ಕಳಿಸಿದ್ದೇವೆ.ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದ್ದೇವೆ ಅದೇ ಕ್ರಮ ಕೈಗೊಳ್ಳುತ್ತೇವೆ. ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜತ್ತ ಕನ್ನಡಿಗರ ಪರ ಸಿಎಂ ಮಾತನಾಡಿದ ಬಳಿಕ ಮಹಾರಾಷ್ಟ್ರ ಸರ್ಕಾರ ನೀರಾವರಿ ಯೋಜನೆಗೆ 2000 ಕೋಟಿ ಘೋಷಣೆ ವಿಚಾರ.
ಜತ್ತ ತಾಲೂಕಿನ ಕನ್ನಡ ಕುಲಬಾಂಧವರು ಹಲವಾರು ವರ್ಷಗಳಿಂದ ನೀರು ಇಲ್ಲದೇ ಬಳಲುತ್ತಿದ್ರು.
ಆ ಭಾಗಕ್ಕೆ ಕುಡಿಯುವ ನೀರಿನ ಕಷ್ಟ ಇತ್ತು, ಯೋಜನೆ ಮಾಡಿದ್ದಾಗಿ ಹೇಳ್ತಾರೆ.
ಆ ಭಾಗದ ಜನರಿಗೆ ನೀರು ಮುಟ್ಟುವುದು ಬಹಳ ಮುಖ್ಯ ಅದಾಗಲಿ ಅಂತಾ ಬಯಸುವೆ ಎಂದ ಸಿಎಂ ಹೇಳಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ