Breaking News

ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರ ಆಗಮನ: ಕೋವಿಡ್‌ ಕಾರಣದಿಂದ ಮಂಕಾಗಿದ್ದ ಟೂರಿಸಂ

Spread the love

ಗೋಕರ್ಣ: ‍ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋಕರ್ಣಕ್ಕೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ್ದಾರೆ. ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ನೆಲಕಚ್ಚಿದ್ದ ಪ್ರವಾಸೋದ್ಯಮವು, ವಿದೇಶಿಗರ ಬರುವಿಕೆಯಿಂದ ಹೊಸ ಹುರುಪು ಹುಟ್ಟಿಸಿದೆ.

 

ಶಿವನ ನಾಡಿಗೆ ವಿದೇಶಿಗರು ಮನಸೋತಿದ್ದಾರೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ಪೇರೇಪಿಸುತ್ತಿದೆ. ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಮೇನ್ ಬೀಚ್‌ಗಳಲ್ಲಿ ವಿದೇಶಿಗರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರಿಯಾ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೊದಲಿನಿಂದಲೂ ಬರುತ್ತಾರೆ. ಇಸ್ರೇಲ್ ಮತ್ತು ರಷ್ಯಾದ ಸಾಕಷ್ಟು ಮಂದಿ ಕೂಡ ಹಲವಾರು ವರ್ಷಗಳಿಂದ ಭೇಟಿ ನೀಡುತ್ತಿದ್ದಾರೆ. ಕೆಲವರಂತೂ ಸತತವಾಗಿ 2- 3 ದಶಕಗಳಿಂದ ಬರುತ್ತಿದ್ದಾರೆ.

ಕೆಲವು ವರ್ಷಗಳಿಂದ ವಿದೇಶಿಗರಿಗೆ ಗೋವಾಕ್ಕಿಂತಲೂ ಗೋಕರ್ಣ ನೆಚ್ಚಿನ ತಾಣವಾಗಿದೆ. ಗೋಕರ್ಣದ ಶೇ 90ರಷ್ಟು ಜನ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಸ್ವದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

ಪರಿಹಾರವಾಗದ ಸಮಸ್ಯೆ

ವಿದೇಶಿಗರ ಉಪಯೋಗಕ್ಕಾಗಿ ಸಮುದ್ರ ತೀರಗಳಲ್ಲಿ ಸ್ಥಳೀಯರು ಪ್ರತಿ ವರ್ಷ ತಾತ್ಕಾಲಿಕ ಶೆಕ್ಸ್‌, ವಸತಿ ಗೃಹಗಳು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಅದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯು ಜಾಗದ ಮಾಲೀಕರಿಂದ ನಿರ್ದಿಷ್ಟ ಶುಲ್ಕ ಪಡೆಯುತ್ತದೆ. ಗೋಕರ್ಣದ ಎಲ್ಲಾ ಬೀಚ್‌ಗಳಲ್ಲಿ 300ಕ್ಕೂ ಹೆಚ್ಚು ಅಂಗಡಿಗಳಿವೆ.

ಸ್ಥಳೀಯ ಆಡಳಿತ ನಿಗದಿ ಪಡಿಸಿದ ಹಣವನ್ನು ತುಂಬಿ ತಾತ್ಕಾಲಿಕ ಪರವಾನಗಿ ಪಡೆದರೂ ಉಳಿದ ಇಲಾಖೆಗಳಿಂದ ಸಮಸ್ಯೆ ಉಂಟಾಗುತ್ತಿದೆ. ಸಮುದ್ರ ದಂಡೆಯಲ್ಲಿ ಪ್ರವಾಸಿಗರ ರಕ್ಷಣೆಗೆಗಾಗಿ ನಿಯುಕ್ತಿಗೊಂಡ ಜೀವರಕ್ಷಕರಿಗೂ ಅಂಗಡಿಕಾರರೇ ಹಣ ಸಂದಾಯ ಮಾಡಬೇಕಾಗಿದೆ. ಎಲ್ಲಾ ಇಲಾಖೆಯರಿಗೂ ಬೀಚ್ ಅಂಗಡಿಕಾರರೇ ಗುರಿಯಾಗಿದ್ದಾರೆ ಎಂಬ ಟೀಕೆಗಳಿವೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ