Breaking News

ಕೌಟುಂಬಿಕ ಕಲಹ: ಸತಿ-ಪತಿಯನ್ನು ಒಂದು ಮಾಡಿದ ಚಿಕ್ಕೋಡಿ ನ್ಯಾಯಾಲಯ

Spread the love

ಚಿಕ್ಕೋಡಿ:ಪತ್ನಿ-ಪತಿ ನಡುವೆ ಕೌಟುಂಬಿಕ ಕಲಹದ ಹಿನ್ನಲೇಯಲ್ಲಿ ಸತಿ ಪತಿಗಳನ್ನು ಒಂದು ಮಾಡಿದ ನ್ಯಾಯಾಲಯ. ಚಿಕ್ಕೋಡಿ ಹಿರಿಯ ದಿವಾಣಿ ನ್ಯಾಯಾಲಯವು ನ್ಯಾಯವಾದಿಗಳ ಸಮ್ಮುಖದಲ್ಲಿ ಕಳೆದ ಮೂರು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಪತಿ-ಪತ್ನಿಯನ್ನು ನ್ಯಾಯಾಲಯದಲ್ಲಿ ಸಂಧಾನ ಮಾಡುವ ಮೂಲಕ ಇಬ್ಬರನ್ನು ಒಂದು ಮಾಡಿದೆ.

 

ಪಟ್ಟಣ ರಾಮನಗರದ‌ ನಿವಾಸಿಗಳಾದ ಸತೀಶ ಕೋಮಾರಿ ಹಾಗೂ ಪಾರ್ವತಿ ಸತೀಶ ಕೋಮಾರಿ ಅವರು ಕಳೆದ ಮೂರು ವರ್ಷಗಳಿಂದ ಕೌಟುಂಬಿಕ ಕಲಹದ‌ ಹಿನ್ನಲೆಯಲ್ಲಿ ದೂರಾಗಿದ್ದರು.ಈ ಕುರಿತು ಪತ್ನಿ ಪಾರ್ವತಿ ಕಳೆದ ಒಂದು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ಚಿಕ್ಕೋಡಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಶ್ರೀಕಾಂತ ಅವರ ಸಮ್ಮುಖದಲ್ಲಿ ಪತಿ-ಪತ್ನಿ ಕರೆದು ನ್ಯಾಯಾವಾದಿಗಳ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿ ಬೇರೆಯಾಗಿದ್ದ ಸತಿ-ಪತಿಯನ್ನು ಒಂದು ಮಾಡಿ ಬುಧವಾರ ಅದೇಶ ಮಾಡಿದ್ದಾರೆ.

ನ್ಯಾಯಾಲಯದ ಆದೇಶಕ್ಕೆ ಸಾರ್ವಜನಿಕರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.ಅರ್ಜಿದಾರ ಪಾರ್ವತಿ ಕೋಮಾರಿ ಪರವಾಗಿ ರವಿ ಹುದ್ದಾರ ಹಾಗೂ ಸತೀಶ ಕೋಮಾರಿ ಅವರ ಪರವಾಗಿ ನ್ಯಾಯವಾದಿ ಮಿಥುನ ಕಾಂಬಳೆ ಅವರು ಅರ್ಜಿ ಸಲ್ಲಿಸಿ ರಾಜಿ ಸಂಧಾನ ಮಾಡಿದ್ದರು.ಸರಕಾರಿ ಅಪರ ಅಭಿಯೋಜಕರಾದ ಆರ್.ಐ.ಖೋತ,ನ್ಯಾಯವಾದಿ ಡಾ.ಎಂ.ಎಸ್.ಕಬಾಡಗಿ ಮಧ್ಯಸ್ತಿಕೆ ವಹಿಸಿದ್ದರು.


Spread the love

About Laxminews 24x7

Check Also

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ

Spread the love ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ