Breaking News

H.D.K.ಸಿಎಂ ಆಗ್ತಾರೆ: C.M. ಇಬ್ರಾಹಿಂ

Spread the love

: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಶಕ್ತಿ ಏನೆಂದು ತಿಳಿಯುತ್ತದೆ. ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

 

ಅವರು ಮಂಗಳವಾರ ಪಟ್ಟಣದ ಲೋಕಮಾನ್ಯ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅತ್ಯಲ್ಪ ಅವಧಿಗೆ ಜೆಡಿಎಸ್‌ ಸರ್ಕಾರವಿದ್ದಾಗ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಪ್ರತಿ ಪಂಚಾಯತ್‌ ವ್ಯಾಪ್ತಿಯಲ್ಲಿ ಇಂಟರ್‌ ನ್ಯಾಶನಲ್‌ ಮಟ್ಟದ ಶಾಲೆ ಆರಂಭಿಸುವ ಯೋಜನೆ ಇದೆ.

5 ವರ್ಷಗಳಲ್ಲಿ 30 ಲಕ್ಷ ಕೋಟಿ ಹಣ ಖರ್ಚು ಮಾಡಿ ನೀರಾವರಿ ಮತ್ತು ರಸ್ತೆಗಳ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಪಂಚರತ್ನ ಯೋಜನೆಯಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳಿಗೆ ಯೋಗ್ಯ ಬೆಲೆ ದೊರಕಿಸಲು 50 ಸಾವಿರ ಕೋಟಿ ಯೋಜನೆ ರೂಪಿಸಲಾಗುವುದು. ಗೋವಾದಲ್ಲಿ ಕೂಡ ಬಿಜೆಪಿ ಸರ್ಕಾರವಿದ್ದರೂ ಕಳಸಾ ಬಂಡೂರಿ ಯೋಜನೆ ಯಾಕೆ ಪೂರ್ಣಗೊಳಿಸಲಾಗುತ್ತಿಲ್ಲ ಎಂದು ಸರ್ಕಾರ ಯಾವ ಸ್ಥಿತಿಯಲ್ಲಿದೆ ನೋಡಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸುಳ್ಳು ಯೋಜನೆಗಳನ್ನು ರೂಪಿಸಿ ಮೋಸ ಮಾಡುತ್ತಿದ್ದು ಶೆ.40 ಕಮಿಶನ್‌ ಪಡೆಯುವ ಸರ್ಕಾರವಾಗಿದೆ ಎಂದು ಟೀಕಿಸಿದರು. ನುಡಿದಂತೆ ನಡೆಯುವುದು ಜೆಡಿಎಸ್‌ ಪಕ್ಷ ಮಾತ್ರ ಎಂದರು. ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳು ಸಾಲ ಕಟ್ಟಬೇಕಿಲ್ಲ ಸರ್ಕಾರವೇ ಅದನ್ನು ಭರಿಸಲಿದೆ ಎಂದರು. ಪ್ರಧಾನಿ ಮೋದಿಗೆ ಹೆಂಡತಿ, ಮಕ್ಕಳು, ಕುಟುಂಬದ ಯಾವ ಚಿಂತೆಯೂ ಇಲ್ಲ. ಹೀಗಾಗಿ ರಾಜ ವ್ಯಾಪಾರಿ, ಆದರೆ ಪ್ರಜೆಗಳು ಭಿಕಾರಿಯಾಗುತ್ತಿದ್ದಾರೆ ಎಂದರು.

ಜೆಡಿಎಸ್‌ ಕೋರ್‌ ಕಮೀಟಿ ಸದಸ್ಯ ನಾಸೀರ ಬಾಗವಾನ್‌ ಮಾತನಾಡಿ, ಯಾವ ಶಾಸಕರೂ ಮಾಡದಂತಹ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿ ತೋರಿಸಿರುವೆ. ಎಲ್ಲ ಸಮಾಜದ ಜನರಿಗೆ ನ್ಯಾಯ ಒದಗಿಸಿರುವೆ. ಈ ಬಾರಿ ಜೆಡಿಎಸ್‌ ಗೆಲ್ಲಿಸಲು ಬೆಂಬಲಿಸಬೇಕು ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಪಕ್ಷದ ಆದೇಶದಂತೆ ಪ್ರತಿ ಬೂತ್‌ ಮಟ್ಟದಲ್ಲಿ ಸಮಿತಿ ರಚನೆ ಮಾಡುವುದರ ಮೂಲಕ ಪಕ್ಷವನ್ನು ಬಲಿಷ್ಟಗೊಳಿಸಬೇಕು ಎಂದರು.

ಪ್ರತಾಪ ಪಾಟೀಲ, ನ್ಯಾಯವಾದಿ ಎಚ್‌. ಎನ್‌. ದೇಸಾಯಿ, ಪಪಂ ಸದಸ್ಯೆ ಮೇಘಾ ಕುಂದರಗಿ, ಬ್ಲಾಕ್‌ ಅಧ್ಯಕ್ಷ ಎಂ.ಎಂ.ಸಾಹುಕಾರ ಮಾತನಾಡಿದರು. ವೇದಿಕೆ ಮೇಲೆ ಜೆಡಿಎಸ್‌ ಉಪಾಧ್ಯಕ್ಷ ನಾಗರಾಜ ಹುಬ್ಬಳ್ಳಿ, ಫೈಜುಲ್ಲಾ ಮಾಡಿವಾಲೆ, ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಸಂಜೀವ, ಉಪಾಧ್ಯಕ್ಷ ರವಿಂದ್ರ ಕಾಡಗಿ, ಪಪಂ ಸದಸ್ಯ ರಫೀಕ ವಾರಿಮನಿ ಮುಂತಾದವರು ಉಪಸ್ಥಿತರಿದ್ದರು. ಲಿಯಾಖಲಿ ಬಿಚ್ಚುಣ್ಣವರ ಸ್ವಾಗತಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ