Breaking News

ಕೆಎಸ್‌ಆರ್‌ಟಿಸಿ: 1,013 ನೌಕರರ ವರ್ಗಾವಣೆ

Spread the love

ಬೆಂಗಳೂರು: ಅಂತರ್‌ ನಿಗಮ ವರ್ಗಾವಣೆಗೆ ಕೋರಿ ಅರ್ಜಿ ಸಲ್ಲಿಸಿದ್ದ 4,665 ಸಾರಿಗೆ ನಿಗಮಗಳ ನೌಕರರ ಪೈಕಿ 1,013 ನೌಕರರನ್ನು ವರ್ಗಾವಣೆ ಮಾಡಿ ಬುಧವಾರ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ 4ರ ನೌಕರರ ಅಂತರ ನಿಗಮ ವರ್ಗಾವಣೆ ಮಾಡಲಾಗಿದ್ದು, ಆದೇಶ ಪತ್ರಗಳನ್ನು ನಿಗಮದ ವೆಬ್‌ಸೈಟ್‌ https://ksrtc.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಸೇವಾ ಜ್ಯೇಷ್ಠತೆ ಮತ್ತು ಹಾಲಿ ಹು¨ªೆಗಳಿಗೆ ಅನುಗುಣವಾಗಿ ಕೌನ್ಸೆಲಿಂಗ್‌ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು.

ಈ ಸಂಬಂಧದ ಕೌನ್ಸೆಲಿಂಗ್‌ ಡಿ. 5ರಿಂದ 15ರ ತನಕ ವೆಬ್‌ಸೈಟ್‌ನಲ್ಲಿ (ksrtc.org/counseling)ನಡೆಸಲಾಗುವುದು. ಈ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಲಿಖಿತ ಅರ್ಜಿಗಗಳ ಆಧಾರದ ಮೇಲೆ ಯಾವುದೇ ಕ್ರಮ ವಹಿಸುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ನಿರ್ದೇಶಕರು (ಸಿಬಂದಿ ಮತ್ತು ಜಾಗೃತ) ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ