ಬೆಂಗಳೂರು: ಇತ್ತೀಚೆಗೆ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಈಗ ನಾಗರಭಾವಿಯ ಬಳಿ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ, ನಿನ್ನೆ (ಮಂಗಳವಾರ) ಸಂಜೆ ಸುಮಾರು 5.30ರ ಹೊತ್ತಿಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್ ಹತ್ತಿದ್ದರು.
ಬಸ್ನಲ್ಲಿ ಯಾರೂ ಇರಲಿಲ್ಲ. ಆದರೆ ಚಾಲಕ ಪರಿಚಿತ ಆಗಿದ್ದ ಕಾರಣ ಮಹಿಳೆ ಬಸ್ ಹತ್ತಿದ್ದರು. ಈ ವೇಳೆ ಬಸ್‌ಅನ್ನು ನಾಗರಭಾವಿ ಸರ್ವೀಸ್ ರಸ್ತೆಗೆ ಕಿರಾತಕ ತೆಗೆದುಕೊಂಡು ಹೋಗಿದ್ದಾನೆ. ಕೈಲಾಸಗಿರಿ ಬಳಿ ಇರುವ ಮಲೆ ಮಹದೇಶ್ವರ ದೇವಸ್ಥಾನದ ಬಳಿ ಬಸ್ ನಿಲ್ಲಿಸಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸಂತ್ರಸ್ತ ಮಹಿಳೆ ಬಸ್ ಪೋಟೋ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ಆಘಾತಗೊಂಡ ಮಹಿಳೆ ತನ್ನ ಮಗನಿಗೆ ಘಟನೆಯ ಬಗ್ಗೆ ತಿಳಿಸಿದ್ದರು. ಈ ಘಟನೆಯ ನಂತರ ಸಂತ್ರಸ್ತೆ ಮಗ ಚಾಲಕನನ್ನು ಹುಡುಕಿಕೊಂಡು ಹೋಗಿ ಜಗಳವಾಡಿದ್ದಾನೆ. ಈ ಮಾಹಿತಿಯನ್ನು ಯಾರೋ ಚಂದ್ರಾ ಲೇಔಟ್ ಪೊಲೀಸರಿಗೆ ಮುಟ್ಟಿಸಿದ್ದು ಇದರಿಂದ ಘಟನೆ ಬೆಳಕಿಗೆ ಬಂದಿದೆ.