ಅಹಮದಾಬಾದ್: ಗುರುವಾರ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ರಾಜ್ಯ ಸರ್ವಸನ್ನದ್ಧಗೊಂಡಿದೆ. ಸೌರಾಷ್ಟ್ರ-ಕಛ್ ಮತ್ತು ದಣ ಭಾಗಗಳ 19 ಜಿಲ್ಲೆಗಳ 89 ಸ್ಥಾನಗಳ ಜನಪ್ರತಿನಿಧಿಗಳ ಆಯ್ಕೆಗೆ ಗುರುವಾರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈ ಹಂತದಲ್ಲಿ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯ ಮಂಗಳವಾರ ಸಂಜೆ ಕೊನೆಗೊಂಡಿತ್ತು. 14,382 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 89 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಆಪ್ನ 88 ಹುರಿಯಾಳುಗಳಿದ್ದಾರೆ. 339 ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಬಿಎಸ್ಪಿ 57, ಬಿಟಿಪಿ 14 ಹಾಗೂ ಸಿಪಿಐ (ಎಂ) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್ ಗಢವಿ ಸೌರಾಷ್ಟ್ರ ವಲಯದ ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿದ್ದಾರೆ.