ಬೆಂಗಳೂರು, ನವೆಂಬರ್ 30: ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಬಿಜೆಪಿ ವಿರುದ್ಧ ಮುಗಿಬಿದ್ದಿದೆ.
ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ.
ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ನಿಯಂತ್ರಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಪೊಲೀಸರೆದುರು ಪರೇಡ್ ಮಾಡ್ತಿದ್ದ ರೌಡಿಗಳು ಈಗ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲು ಪರೇಡ್ ಮಾಡುತ್ತಿದ್ದಾರೆ. ರೌಡಿಗಳ ಸಮರ್ಥನೆಗೆ ಇಳಿದಿದೆ ಬಿಜೆಪಿ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.