ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಚಂದನವನ ಕೃಷಿ ಮತ್ತು ನೂತನ ನೀರಾವರಿ ವ್ಯವಸ್ಥೆ ಉದ್ಘಾಟನಾ ಸಮಾರಂಭ ಜರುಗಿತು.
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ ಅದ್ಯಕ್ಷ ರಮೇಶ ಕತ್ತಿ ಚಂದನವನ ಲೋಕಾರ್ಪಣೆ ಮಾಡಿದರು
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಇಂದಿನ ಯುವ ಪಿಳಿಗೆಗೆ ನಮ್ಮ ಹಳ್ಳಿಯ ಜಿವನ ಶೈಲಿ ಪರಿಚಯಿಸುವ ಮತ್ತು ಕಟ್ಟಿಗೆಯಿಂದ ಮಾಡಿದ ಕಲಾಕೃತಿಗಳ ಪ್ರದರ್ಶನ ಹಾಗೂ ರೈತರಿಗೆ ಆಧುನಿಕ ನೀರಾವರಿ ಪದ್ದತಿ ಕುರಿತು ಪ್ರಾತ್ಯಕ್ಷಿಕೆಯನ್ನು ಮಾಜಿ ಹಿರಾ ಶುಗರ ವ್ಯವಸ್ಥಾಪಕ ನಿರ್ದೆಶಕ ಡಾ, ಅಶೋಕ ಪಾಟೀಲ ಚಂದನವನ ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಮಾರ್ಗದರ್ಶನ ನೀಡುವದು ಸಂತಸ ತಂದಿದೆ ಎಂದರು.
ನಂತರ ಗಣ್ಯರು ವಿವಿಧ ಕಾರ್ಯ ಶೈಲಿಯನ್ನು ವೀಕ್ಷಿಸಿದರು. ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ ನಮ್ಮ ಪೂರ್ವಜರು ಹಾಕಿ ಕೋಟ್ಟ ಮಾರ್ಗದರ್ಶನದಲ್ಲಿ ನಮ್ಮ ಯುವ ಜನತೆ ಮುಂದು ವರೆಸಿಕೊಂಡು ಹೋಗಲು ಗ್ರಾಮಿಣ ಭಾಗದ ರೈತರಿಗೆ ಕೃಷಿ ಪದ್ದತಿಯಲ್ಲಿ ಆಧುನಿಕ ನೀರಾವರಿ ಯೋಜನೆಗಳನ್ನು ಗುರುತಿಸಿ ಲಾಭದಾಯಕ ಬೆಳೆಯೊಂದಿಗೆ ಆರ್ಥಿಕವಾಗಿ ಸಬಲರಾಗುವ ಮಾರ್ಗವನ್ನು ಅಶೊಕ ಪಾಟೀಲ ಮಾದರಿಯಾಗಿದ್ದಾರೆ ಎಂದರು.