ಬೆಳಗಾವಿಯಲ್ಲಿ ಆಯೋಜಿಸಿರುವ ಘರಕುಲ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರು ದಿನಗಳ ಈ ಪ್ರದರ್ಶನಕ್ಕೆ ಅದ್ಧೂರಿ ತೆರೆ ಬಿದ್ದಿದೆ.
ಬೆಳಗಾವಿಯ ಸಿಪಿಇಎಡ್ ಮೈದಾನದಲ್ಲಿ ರೋಟರಿ ಕ್ಲಬ್ ಆಪ್ ವೇಣುಗ್ರಾಮ, ರೋಟರಿ ವೇಣುಗ್ರಾಮ ಚಾರಿಟೇಬಲ್ ಫೌಂಡೇಶನ್ ಹಾಗೂ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಅಸೊಸಿಯೇಷನ್ ಸಹಯೋಗದಲ್ಲಿ ನವೆಂಬರ್ 25ರಿಂದ ನವೆಂಬರ್ 30ರವರೆಗೆ 6 ದಿನಗಳ ಕಾಲ ಆಯೋಜಿಸಲಾಗಿದ್ದ ಘರಕುಲ ರಿಯಲ್ ಎಸ್ಟೇಟ ಮತ್ತು ಕನ್ಸಟ್ರಕ್ಷನ್ ಮಟಿರಿಯಲ್ ಪ್ರದರ್ಶನ ಬುಧವಾರ ಸಮಾರೋಪಗೊಂಡಿತು. ಕಳೆದ ಆರು ದಿನಗಳಿಂದ ಸಾವಿರಾರು ಗ್ರಾಹಕರು ಇಲ್ಲಿಗೆ ಆಗಮಿಸಿ ಈ ಪ್ರದರ್ಶನದ ಸದುಪಯೋಗ ಪಡೆದುಕೊಂಡರು.
ಕಟ್ಟಡ ಸಾಮಗ್ರಿಗಳು, ಪೀಠೋಪಕರಣಗಳು, ಇಂಟಿರಿಯಲ್ ಮತ್ತು ಎಕ್ಸಟಿರಿಯಲ್, ಹಾರ್ಡವೇರ್, ಮಾಡುಲರ್ ಕಿಚನ್ ಸೇರಿ ಮನೆಗೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದೇ ರೀತಿ ರಿಯಲ್ ಎಸ್ಟೇಟ್, ಬ್ಯಾಂಕಗಳಿಂದ ಲೋನ್ ಸೌಲಭ್ಯ ಸೇರಿ ಇನ್ನಿತರ ಅವಕಾಶಗಳನ್ನು ನೀಡಲಾಗಿತ್ತು.
ಈ ಬಗ್ಗೆ ಮಾತನಾಡಿದ ಇವೆಂಟ್ ಚೇರ್ಮನ್ ಸಿ.ಆರ್.ಪಾಟೀಲ್ ಮತ್ತು ರೋಟೇರಿಯನ್ ವಿನಯಕುಮಾರ್ ಬಾಳಿಕಾಯಿ ಮಾತನಾಡಿ 176 ಮಟಿರಿಯಲ್ ಸ್ಟಾಲ್ ಹಾಗೂ 40 ಕಂಜೂಮರ್ ಸ್ಟಾಟಲಗಳನ್ನು ತೆರೆದಿದ್ದೇವು. ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಹಳಷ್ಟು ಜನರು ಈ ಪ್ರದರ್ಶನದ ಸದುಪಯೋಗ ಪಡೆದುಕೊಂಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.