ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಯೋಗ್ಯಬೆಲೆ ನೀಡದೆ ಇರುವುದರಿಂದ ರಾಜ್ಯದ ಗಡಿ ಭಾಗದ ಕಬ್ಬನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಾರೆ. ಕರ್ನಾಟಕ ಬೆಲೆಗೂ ಅಧಿಕ ಬೆಲೆ ನೀಡುತ್ತಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಹೀಗಾಗಿ ಕರ್ನಾಟಕದ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಮಹಾರಾಷ್ಟ್ರದ ಪಾಲಾಗುತ್ತಿದೆ.
ಮಂಡ್ಯ ಜಿಲ್ಲೆಯನ್ನ ಹೊರತು ಪಡಿಸಿದರೆ ಅತಿ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ಟನ್ ಕಬ್ಬಿಗೆ ಮೂರು ಸಾವಿರಕ್ಕೂ ಅಧಿಕ ದರ ನೀಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ 2,900 ಒಳಗೆ ಕಬ್ಬಿನ ಬಿಲ್ ಘೋಷಣೆ ಮಾಡಿದ್ದರಿಂದ ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮದ ರೈತರು ಪಕ್ಕದ ಮಹಾರಾಷ್ಟ್ರದ ಸಾಂಗಲಿ, ಇಚಲಕರಂಜಿ ಕೊಲ್ಲಾಪೂರ ಜಿಲ್ಲೆಗಳಿಗೆ ಕಬ್ಬನು ಸಾಗಿಸುತ್ತಿರುವ ಪರಿಣಾಮ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಮಹಾರಾಷ್ಟ್ರದ ಪಾಲಾಗುತ್ತಿದೆ.