ಬೆಂಗಳೂರು: ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ. ಸೈಬರ್ ಕಳ್ಳರು ಹೊಸ ಮೋಸದ ಅಸ್ತ್ರ ವಾಟ್ಸ್ಆಯಪ್ ವಿಡಿಯೋ ಕಾಲ್ ಬಲೆ ಬೀಸುತ್ತಿದ್ದಾರೆ. ಚಪಲಕ್ಕೆ ಅಶ್ಲೀಲ ವಿಡಿಯೋ ನೋಡಿದರೆ ಸಾಕು ಅದನ್ನೇ ಅಸ್ತ್ರವಾಗಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ ಪೀಕುತ್ತಿದ್ದಾರೆ ಹುಷಾರ್.
ಅದರಲ್ಲಿಯೂ ಇತ್ತೀಚೆಗೆ ನಿವೃತ್ತ ನೌಕರರು ಮತ್ತು ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ೇಸ್ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅಥವಾ ನೇರವಾಗಿ ವಾಟ್ಸ್ಆಯಪ್ನಲ್ಲಿ ವಿಡಿಯೋ ಕಾಲ್ ಮಾಡಿ ಯುವತಿಯರು ಸ್ನೇಹ ಬಯಸುತ್ತಾರೆ.
ವಿಡಿಯೋ ಕಾಲ್ ಮಾಡಿ ಸಂಭಾಷಣೆಗೆ ಎಳೆದು ತಡರಾತ್ರಿ ಏಕಾಏಕಿ ಬೆತ್ತಲೆ ದೃಶ್ಯ ತೋರಿಸುತ್ತಾರೆ. ಚಪಲಕ್ಕೆ ಸ್ವಲ್ಪ ಕಣ್ಣಾಡಿಸಿದರೂ ಸಾಕು ಸೈಬರ್ ಖದೀಮರು, ವಿಡಿಯೋ ಕಾಲ್ನ ಸ್ಕ್ರೀನ್ ಶಾರ್ಟ್ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಒಂದೆಡೆ ಕರೆ ಸ್ವೀಕರಿಸಿದವರ ಫೋಟೋ ಜತೆಗೆ ಕರೆ ಮಾಡಿದವರ ಬೆತ್ತಲೆ ಪೋಟೋ ಸಹ ಸೆರೆಯಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮೋಸಗಾರರು ಕರೆ ಸ್ವೀಕರಿಸಿದವರ ವ್ಯಕ್ತಿಯ ವಾಟ್ಸ್ಆಯಪ್ಗೆ ಅಶ್ಲೀಲ ಫೋಟೋವನ್ನು ಕಳುಹಿಸಿ ಬ್ಲ್ಯಾಕ್ಮೇಲ್ಗೆ ಇಳಿಯುತ್ತಾರೆ. ಫೋನ್ ಪೇ, ಗೂಗಲ್ ಪೇ ಅಥವಾ ನೆಟ್ ಬ್ಯಾಂಕಿಂಗ್ನಲ್ಲಿ ಹಣ ಸುಲಿಗೆ ಮಾಡುತ್ತಾರೆ. ಇಲ್ಲವಾದರೆ, ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಫೇಸ್ಬುಕ್ ಖಾತೆಗೆ ಟ್ಯಾಗ್ ಮಾಡುತ್ತೇವೆ ಅಥವಾ ವಾಟ್ಸ್ಆಯಪ್ಗೆ ಫೋಟೋ ಕಳುಹಿಸಿ ನನ್ನ ಬೆತ್ತಲೆ ದೃಶ್ಯ ತೋರಿಸಿ ಮರ್ಯಾದೆ ತೆಗೆಯುತ್ತೆನೆ ಎಂದು ಬ್ಲ್ಯಾಕ್ಮೇಲ್ ಮಾಡಿ ಸುಲಿಗೆ ಮಾಡುತ್ತಿದ್ದಾರೆ.