ಮೊದಲ ಬಾರಿಗೆ ಸಿಎಂ ಬೊಮ್ಮಾಯಿ ಅವರು ನಮ್ಮ ಪರವಾಗಿ ಮಾತನಾಡಿದ್ದಾರೆ. ಹೀಗಾಗಿ ಕರ್ನಾಟಕ ಮುಖ್ಯಮಂತ್ರಿಗಳ ಹೇಳಿಕೆ ಸ್ವಾಗತಿಸುತ್ತೇವೆ ಎಂದು ಜತ್ ತಾಲ್ಲೂಕು ಕನ್ನಡ ಹೋರಾಟ ಸಮಿತಿಯ ಸೋಮಲಿಂಗ್ ಚೌಧರಿ, ಗೌಡೇಶ ಮಾಡಳ್ಳಿ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಬೆಳಗಾವಿಯ ಖಾಸಗಿ ಹೊಟೇಲ್‍ನಲ್ಲಿ ಮಹಾರಾಷ್ಟ್ರದ ಜತ್ ಕನ್ನಡಿಗರು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 50 ವರ್ಷ ಆಯ್ತು ಮಹಾರಾಷ್ಟ್ರ ಸರ್ಕಾರ, ಜನಪ್ರತಿನಿಧಿಗಳು ಬರೀ ಭರವಸೆ ಕೊಡ್ತಾರೆ ಹೋಗ್ತಾರೆ. ಮೈಸಾಳ್ ನೀರಾವರಿ ಯೋಜನೆ ಜಾರಿಗೆ ತಂದಿಲ್ಲ. ಗಡಿ ಭಾಗದ ಕನ್ನಡ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿವೆ. 200 ಮಕ್ಕಳಿಗೆ ಒಬ್ಬ ಕನ್ನಡ ಶಿಕ್ಷಕರಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ನಮಗೆ ಸೌಲಭ್ಯ ಸಿಗುತ್ತಿಲ್ಲ. ನಾವು ಮಹಾರಾಷ್ಟ್ರದಲ್ಲಿ ಇರಲ್ಲ ಕರ್ನಾಟಕಕ್ಕೆ ಸೇರ್ಪಡೆ ಆಗ್ತಿವಿ. ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಿ. 215 ಕನ್ನಡ ಶಾಲೆಗಳಿಗೆ ಆದರೆ ಸೌಲಭ್ಯವಿಲ್ಲ. ವಿಜಯಪುರ ಶಾಸಕ ಎಂ.ಬಿ.ಪಾಟೀಲ್ ಅವರ ಪುಣ್ಯದಿಂದ ನಮಗೆ ನೀರು ಸಿಗುತ್ತಿದೆ. ನಾವು ಮಹಾರಾಷ್ಟ್ರ ಗಡಿಯಿಂದ ಕರ್ನಾಟಕ ವಿಜಯಪುರ ಜಿಲ್ಲೆ ಗಡಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತೇವೆ ಎಂದರು.
ಬಳಿಕ ಎಂಇಎಸ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಭೀಮಾಶಂಕರ ಪಾಟೀಲ್ ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ., ಬಸವರಾಜ ಬೊಮ್ಮಾಯಿ ಅವರನ್ನ ಮಹಾರಾಷ್ಟ್ರದ ಜತ್ ತಾಲೂಕಿಗೆ ಆಹ್ವಾನ ಮಾಡ್ತಿವಿ. ಜತ್‍ನಲ್ಲಿ ಬೊಮ್ಮಾಯಿ ಅವರಿಗೆ ದಕ್ಷಿಣ ಪಥೇಶ್ವರ ಅಂತಾ ಬಿರುದು ನೀಡಿ ಗೌರವಿಸುತ್ತೇವೆ. ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ಪ್ರಶಸ್ತಿ ಕೊಡ್ತಿವಿ. ಈಗಾಗಲೇ ಸಿಎಂ ಕಚೇರಿ ಜೊತೆಗೆ ಪತ್ರ ಸಂಪರ್ಕ ಮಾಡಿದ್ದೇವೆ ಎಂದರು.