Breaking News

ಶ್ರೀನಗರದಲ್ಲಿ ಆಶ್ರಯ ಮನೆಗಳ ಸರ್ವೇ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು

Spread the love

ಬೆಳಗಾವಿಯ ಶ್ರೀನಗರದಲ್ಲಿ ಆಶ್ರಯ ಮನೆಗಳ ಸರ್ವೇ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಜೋಪಡಿಪಟ್ಟಿಯಲ್ಲಿ ವಾಸಿಸುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಮಂಗಳವಾರ ಶ್ರೀನಗರದ ಆಶ್ರಯ ಮನೆಗಳ ಸರ್ವೇ ಮಾಡಲು ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಆಶ್ರಯ ಮನೆಗಳಲ್ಲಿ ವಾಸಿಸುವ ಜನರ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಜೋಪಡಿಪಟ್ಟಿಯ ನಿವಾಸಿಗಳು ಸರಿಯಾಗಿ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದೇ ವೇಳೆ ನಮ್ಮ  ಜೊತೆಗೆ ಮಾತನಾಡಿದ ಇಲ್ಲಿನ ನಿವಾಸಿ ಮಲ್ಲೇಶ ಹೆಳವರ ಮಾತನಾಡಿ ಶ್ರೀನಗರ ಜೋಪಡಪಟ್ಟಿಯಲ್ಲಿಯೇ ಹುಟ್ಟಿ ಬೆಳೆದವರು, ಏಕರೂಪ್ ಕೌರ್ ಮೇಡಂ ಇದ್ದಾಗಿನಿಂದ ಅದನ್ನು ಸರ್ವೇ ಮಾಡಿದ್ದಾರೆ. ಆಗಿಂದ ಯಾವುದೇ ಸಮಸ್ಯೆ ಇಲ್ಲದೇ ಜೀವನ ಮಾಡುತ್ತಿದ್ದೇವು. ಇಲ್ಲಿ ಮನಿಗಳು ಯಾವಾಗ ತಯಾರು ಆದವು, ಅವತ್ತಿನಿಂದ ನಮ್ಮ ಮೇಲೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ಹತ್ತು ಬಾರಿ ಸರ್ವೇ ಮಾಡುತ್ತಿದ್ದಾರೆ. ನಮ್ಮ ಜನರಿಗೆ ಮನೆ ಸಿಕ್ಕಿಲ್ಲ, ಹೊರಗಿನ ಮಂದಿಗೆ ಮನೆ ಸಿಕ್ಕಿವೆ.

39 ಮನೆಗಳಿವೆ, ಶಾಸಕರು ಸೇರಿಕೊಂಡು ತಮ್ಮ ಲೀಸ್ಟ್ ಮಾಡಿದ್ದಾರೆ. ನಮ್ಮ ಜೋಪಡಪಟ್ಟಿ ಜನರನ್ನು ನಾಳೆ ಹೊರಗೆ ಹಾಕಿದರೆ ನಮ್ಮ ಜನ ಎಣ್ಣಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.ಜಯಶೀಲರಾವ್ ಪೋತದಾರ್ ಮಾತನಾಡಿ 70 ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರಲ್ಲಿ ಪಾರದರ್ಶಕತೆ ಇಲ್ಲ. 4 ಬಾರಿ ಸರ್ವೇ ಮಾಡಿದ್ದಾರೆ. ಆದರೆ ಅದರ ರಿಪೋರ್ಟ ಕೊಟ್ಟಿಲ್ಲ. ಆಟೋನಗರ ಸೇರಿ ಇನ್ನಿತರ ಕಡೆ ಮನೆ ಇದ್ದವರು ಇಲ್ಲಿಗೆ ಬಂದಿದ್ದಾರೆ. ನಿಜವಾಗಿ ಜೋಪಡಿಪಟ್ಟಿಯಲ್ಲಿ ಇದ್ದವರಿಗೆ ಮನೆ ಸಿಕ್ಕಿಲ್ಲ. ಎರಡು ಬಾರಿ ಕಮಿಷನರ್ ಕಡೆ ಹೋದರೂ ಯಾವುದೇ ರೀತಿ ಪ್ರಯೋಜನ ಆಗಿಲ್ಲ. ಇಂದು ಹೇಳದೇ ಕೇಳದೇ ಸರ್ವೇ ಮಾಡಲು ಬಂದಿದ್ದಾರೆ ಎಂದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ