ಬೆಳಗಾವಿಯ ಜಯನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಮತ್ತು ಕರೆಮ್ಮಾ ದೇವಿ ಮಂದಿರ ಆವರಣದಲ್ಲಿ ದೇವರ ಹಳೆಯ ಫೋಟೋಗಳನ್ನು ಸರ್ವಲೋಕ ಸೇವಾ ಫೌಂಡೇಶನ್ ಸದಸ್ಯರು ಸಂಗ್ರಹಿಸಿದರು.
ಮಂಗಳವಾರ ಸರ್ವಲೋಕ ಸೇವಾ ಫೌಂಡೇಶನ್ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ಕರೆಮ್ಮಾ ದೇವಿ ಮಂದಿರ ಆವರಣದಲ್ಲಿ ಇಟ್ಟಿದ್ದ ದೇವರ ಹಳೆಯ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲು ಸಂಗ್ರಹಿಸಲಾಯಿತು. ಇದೇ ವೇಳೆ ಬಿಲ್ವಪತ್ರಿ ಮತ್ತು ಬನ್ನಿ ಮರಗಳನ್ನು ನೆಡಲಾಯಿತು. ಈ ಕಾರ್ಯಕ್ಕೆ ದೇವಸ್ಥಾನ ಕಮೀಟಿ ಅವರು ಕೂಡ ಸಾಥ್ ಕೊಟ್ಟರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಪ್ರೇಮಾನಂದ ಕೇರೂರ, ದುಂಡಪ್ಪ ಸಂಕೇಶ್ವರ, ಎಮ್.ಎಸ್.ಕೃಷ್ಣಮೂರ್ತಿ, ಈಶ್ವರ ತಿಮ್ಮಾಪುರ, ಸುರೇಶ ಹೊಸಮನಿ, ಮಾರ್ತಂಡ ಕುಲಕರ್ಣಿ, ರವೀಂದ್ರ ಪಟ್ಟಣಶೆಟ್ಟಿ, ಬಿ.ಎಮ್.ಹೊಸಪೇಟೆ, ದೇವಪ್ಪ ಕಾಂಬಳೆ ಸೇರಿ ಇನ್ನಿತರರು ಭಾಗಿಯಾಗಿದ್ದರು.