Breaking News

‘ಜೋಡೆತ್ತುಗಳು ಚಿರತೆಗಳಾಗಿ ಬಿಜೆಪಿಯವರನ್ನು ಬೆನ್ನು ಹತ್ತುತ್ತಿವೆ: ಸತೀಶ್‌ ಜಾರಕಿಹೊಳಿ

Spread the love

ಕೊಪ್ಪಳ: ಬಿಜೆಪಿಗಿಂತಲೂ ಕಾಂಗ್ರೆಸ್‌ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಹಿಂದೂಗಳಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಹಟ್ಟಿ ಕ್ರಾಸ್‌ ಬಳಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿ.ಟಿ.

ರವಿ ನೀಡಿದ್ದ ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತದೆ’ ಎನ್ನುವ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು.

‘ಬಿಜೆಪಿ ಅಧಿಕಾರದಲ್ಲಿ ಇರುವಾಗ ಹಿಂದೂಗಳ ಹತ್ಯೆಗಳಾಗುತ್ತಿಲ್ಲವೇ? ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಇತ್ತೀಚೆಗೆ ಆಗಿದ್ದೇನು? ರಾಜಕೀಯ ಕಾರಣಕ್ಕಾಗಿ ಸಿ.ಟಿ. ರವಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ಮಾತ್ರ ಹಿಂದೂಗಳಿಗೆ ರಕ್ಷಣೆ ಸಿಗುತ್ತದೆ’ ಎಂದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಜೋಡೆತ್ತುಗಳು ಅಲ್ಲ; ಮುಖ್ಯಮಂತ್ರಿ ಕುರ್ಚಿಗೆ ಬಡಿದಾಡುತ್ತಿರುವ ಚಿರತೆಗಳು ಎಂದು ಸಚಿವ ಶ್ರೀರಾಮುಲು ಕೊಪ್ಪಳದಲ್ಲಿ ಸೋಮವಾರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್‌ ‘ಜೋಡೆತ್ತುಗಳು ಚಿರತೆಗಳಾಗಿ ಬಿಜೆಪಿಯವರನ್ನು ಬೆನ್ನು ಹತ್ತುತ್ತಿವೆ’ ಎಂದರು.

‘ದೇಶದಲ್ಲಿ ಸಂವಿಧಾನ ರಕ್ಷಣೆ ಆಗುತ್ತಿರುವುದೇ ಕಾಂಗ್ರೆಸ್‌ನಿಂದ. ಅದನ್ನು ಬದಲಿಸಲು ಯಾರಿಗೂ ಬಿಡುವುದಿಲ್ಲ. ಸಂವಿಧಾನವನ್ನು ಬದಲು ಮಾಡುವ ಸಲುವಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದು ಎನ್ನುವ ಮನೋಭಾವನೆಯಿಂದ ನಡೆದುಕೊಳ್ಳುತ್ತಿರುವ ಬಿಜೆಪಿಗೆ ತಮ್ಮ ಉದ್ದೇಶ ಈಡೇರಲು ಬಿಡಬಾರದು’ ಎಂದು ಹೇಳಿದರು.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ