ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾನೆ ಎಂಬ ವದಂತಿ ಬೆನ್ನಲ್ಲೇ ಬೆಂಗಳೂರು ನಗರ ವೈಯಾಲಿಕಾವಲ್ ರೌಡಿ ಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ.
ಈತಕ್ರಿಕೆಟ್ಬುಕ್ಕಿಯಾಗಿದ್ದು ಅನೇಕ ಕಾನೂನು ಬಾಹಿರ ಚಟುವಟಕೆಯಲ್ಲಿ ಭಾಗಿಯಾಗಿದ್ದಾನೆ. ಈತ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ ಎನ್ನಲಾಗಿದೆ. ರೌಡಿಶೀಟರ್ ಗಳು, ಬುಕ್ಕಿಗಳು ಬಿಜೆಪಿ ಪಕ್ಷ ಸೇರುತ್ತಿರುವುದರಿಂದ ಭಾರತೀಯ ಜನತಾ ಪಕ್ಷ ಜನರಿಗೆ ಏನೂ ಸಂದೇಶ ಕೊಡಲು ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ.
ಇನ್ನು ನಿನ್ನೆ ತಾನೇ ಭಾರತೀಯ ಜನತಾ ಪಕ್ಷದ ಇಬ್ಬರು ಎಂಪಿಗಳಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಹಾಗೂ ಶಾಸಕ ಉದಯ್ ಉದಯ್ ಗರುಡಾಚಾರ್ ಸಮ್ಮುಖದಲ್ಲಿ ರೌಡಿಶೀಡರ್ ಸುನೀಲ ರಕ್ತದಾನ ಶಿಬಿರ ಮಾಡಿದ್ದಾನೆ.
ಇಂದು ಬುಕ್ಕಿ,ರೌಡಿಶೀಟರಫೈಟರ್ ರವಿ ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೇಶ್ವರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.