Breaking News

2nd PUC ವಾರ್ಷಿಕ ಪರೀಕ್ಷೆ ದಿನಾಂಕ ನಿಗದಿ, ವೇಳಾಪಟ್ಟಿ ಬಿಡುಗಡೆ

Spread the love

ಬೆಂಗಳೂರು, ನವೆಂಬರ್ 28: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನೀರ್ಣಯ ಮಂಡಳಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಿದೆ.

2023ರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ತಿಗಳ ವಾರ್ಷಿಕ ನಡೆಸಲು ಮಂಡಳಿ ತೀರ್ಮಾನಿಸಿದೆ.

ಮುಂದಿನ ವರ್ಷ ಮಾರ್ಚ 09 ರಿಂದ 29 ರವರೆಗೆ ನಡೆಸಲು ಮಂಡಳಿ ನಿರ್ಧರಿಸಿದ್ದು, ಈ ಸಂಬಂಧ ತಾತ್ಕಾಲಿಕ ಪ್ಟಟ್ಟಿ ಬಿಡುಗಡೆ ಮಾಡಿದೆ. ಈ ಕುರಿತು ಜಿಲ್ಲಾ ಉಪನಿರ್ದೇಶಕರುಗಳಿಗೆ ಸಂಬಂಧಿಸಿದ ಕಾಲೇಜು ಸೂಚನಾ ಫಲಕದಲ್ಲಿ ಅಳವಡಿಸುವಂತೆ ತಿಳಿಸಲಾಗಿದೆ.

 

ವೇಳಾಪಟ್ಟಿ ನೋಡುವ ವಿಧಾನ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನೀರ್ಣಯ ಮಂಡಳಿ ಅಧಿಕೃತ ವೆಬ್‌ಸೈಟ್‌https://sslc.karnataka.gov.inಗೆ ಭೇಟಿ ನೀಡಿ. ನಂತರ ಹೋಮ್ ಪರದೆಯ ಮೇಲೆ ಕಾಣುವ ಪಿಯು ಎಕ್ಸಾಮಿನೇಷನ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿ. ನಂತರ ಅಲ್ಲಿ ಮೊದಲ ಸಾಲಿನಲ್ಲಿ ಬರುವ ಪಿಯುಸಿ ವೇಳಾಪಟ್ಟಿ ವೇಳಾಪಟ್ಟಿ 2023ರ ಆಯ್ಕೆ ಮಾಡಿ ನೋಡಬಹುದು.

ಪರೀಕ್ಷಾ ವೇಳಾಪಟ್ಟಿ ಹೀಗಿದೆ

2023ರ ಮಾರ್ಚ್ 09ರಿಂದ 29ರವರೆಗೆ ಪರೀಕ್ಷೆಗಳು ನಿತ್ಯ ಒಂದರಂತೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಜರುಗಲಿವೆ ಎಂದು ಮಂಡಳಿ ತಿಳಿಸಿವೆ. ವೇಳಾಪಟ್ಟಿ ನೋಡುವುದಾದರೆ.

ದಿನಾಂಕ ವಾರ ವಿಷಯ

09/03/2023 ಗುರುವಾರ ಕನ್ನಡ (ಸಂಕೇತ01)/ಅರೇಬಿಕ್ (11)

10/03/2023 ಶುಕ್ರವಾರ ಯಾವ ಪರೀಕ್ಷೆ ಇಲ್ಲ

11/03/2023 ಶನಿವಾರ ಗಣಿತಶಾಸ್ತ್ರ (35)/ಶಿಕ್ಷಣ ಶಾಸ್ತ್ರ(52)

12/03/2023 ಭಾನುವಾರ ರಜಾದಿನ

13/03/2023 ಸೋಮವಾರ ಅರ್ಥಶಾಸ್ತ್ರ(22)

14/03/2023 ಮಂಗಳವಾರ ಕರ್ನಾಟಕ ಸಂಗೀತ (25) ಹಿಂದೂಸ್ತಾನಿ ಸಂಗೀತ (26) ಮನಃಶಾಸ್ತ್ರ(32) ರಸಾಯನಶಾಸ್ತ್ರ (34) ಮೂಲ ಗಣಿತ (75).

15/03/2023 ಬುಧವಾರ ಸಂಸ್ಕೃತ (09) ತಮಿಳು (04) ತಲುಗು (05) ಮರಾಠಿ (07)

16/03/2023 ಗುರುವಾರ ತರ್ಕಶಾಸ್ತ್ರ(23) ವ್ಯವಹಾರ ಅಧ್ಯಯನ (27)

17/03/2023 ಶುಕ್ರವಾರ ಮಾಹಿತಿ ತಂತ್ರಜ್ಞಾನ (61) ರಿಟೈಲ್ (62) ಆಟೋಮೊಬೈಲ್ (63)ಹೆಲ್ತ್ ಕೇರ್ (64) ಬ್ಯೂಟಿ ವೆಲ್‌ಸನ್ (65)

18/03/2023 ಶನಿವಾರ ಭೋಗೋಳಶಾಸ್ತ್ರ (24) ಜೀವಶಾಸ್ತ್ರ (36)

19/03/2023 ಭಾನುವಾರ ರಜಾದಿನ

20/03/2023 ಸೋಮವಾರ ಇತಿಹಾಸ(21) ಭೌತಶಾಸ್ತ್ರ(33)

21/03/2023 ಮಂಗಳವಾರ ಹಿಂದಿ (03)

22/03/2023 ಬುಧವಾರ ಯುಗಾದಿ ರಜೆ

23/03/2023 ಗುರುವಾರ ಇಂಗ್ಲೀಷ್ (02)

24/03/2023 ಶುಕ್ರವಾರ ಯಾವ ಪರೀಕ್ಷೆ ಇಲ್ಲ

25/03/2023 ಶನಿವಾರ ರಾಜ್ಯಶಾಸ್ತ್ರ(29) ಸಂಖ್ಯಾಶಾಸ್ತ್ರ(31)

26/03/2023 ಭಾನುವಾರ ರಜಾದಿನ

27/03/2023 ಸೋಮವಾರ ಐಚ್ಚಿಕ ಕನ್ನಡ(16) ಲೆಕ್ಕಶಾಸ್ತ್ರ(30) ಭೂಗರ್ಭಶಾಸ್ತ್ರ(37) ಗೃಹ ವಿಜ್ಞಾನ (67)

28/03/2023 ಮಂಗಳವಾರ ಯಾವ ಪರೀಕ್ಷೆ ಇಲ್ಲ

29/03/2023 ಬುಧವಾರ ಸಮಾಜಶಾಸ್ತ್ರ(28) ವಿದ್ಯುನ್ಮಾನಶಾಸ್ತ್ರ(40) ಗಣಿತ ವಿಜ್ಞಾನ (41)


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ