Breaking News

ಕೇಂದ್ರ ಸರ್ಕಾರದಿಂದ ಮಹತ್ವ ಘೋಷಣೆ ; ‘ಟೋಲ್ ತೆರಿಗೆ ನಿಯಮ’ ಚೇಂಜ್, ‘ಗ್ರೀನ್ ಎಕ್ಸ್ಪ್ರೆಸ್ವೇ’ ನಿರ್ಮಾಣ

Spread the love

ವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಹೊರಟಿದೆ. ಹೆದ್ದಾರಿಗಳ ಟೋಲ್ ತೆರಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೋಟ್ಯಂತರ ಚಾಲಕರ ಮೇಲೆ ಪರಿಣಾಮ ಬೀರುವ ಟೋಲ್ ತೆರಿಗೆ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.

ಹೌದು, 2024ರ ವೇಳೆಗೆ ದೇಶದಲ್ಲಿ 26 ಹಸಿರು ಎಕ್ಸ್ಪ್ರೆಸ್ವೇಗಳನ್ನ ನಿರ್ಮಿಸಲಾಗುವುದು ಮತ್ತು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಸಹ ಹೊರಡಿಸಲಾಗುವುದು ಎಂದು ಗಡ್ಕರಿ ಹೇಳಿದರು.

ಟೋಲ್ ಟ್ಯಾಕ್ಸ್ ತಂತ್ರಜ್ಞಾನದಲ್ಲಿ ಬದಲಾವಣೆ.!
ಈ ಟೋಲ್ ಟ್ಯಾಕ್ಸ್ ತಂತ್ರಜ್ಞಾನದಲ್ಲಿ ಬದಲಾವಣೆ ತರಲಾಗುವುದು ಎಂದು ಅವರು ಬಹಿರಂಗಪಡಿಸಿದರು. ಗ್ರೀನ್ ಎಕ್ಸ್ಪ್ರೆಸ್ವೇ ನಿರ್ಮಾಣದ ನಂತರ ಭಾರತವು ರಸ್ತೆಗಳ ವಿಷಯದಲ್ಲಿ ಅಮೆರಿಕಕ್ಕೆ ಸರಿಸಮಾನವಾಗಲಿದೆ ಎಂದು ಹೇಳಿದರು. ಇದರೊಂದಿಗೆ ಟೋಲ್ ತೆರಿಗೆ ಸಂಗ್ರಹಿಸುವ ನಿಯಮಗಳು ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಸರ್ಕಾರದಿಂದ ಟೋಲ್ ತೆರಿಗೆ ವಸೂಲಾತಿಗೆ 2 ವಿಧಾನಗಳು.!
ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನ ನೀಡಲು ಸರ್ಕಾರ ಯೋಜಿಸುತ್ತಿದೆ. ಇವುಗಳಲ್ಲಿ ಮೊದಲನೆಯದು ಕಾರುಗಳಲ್ಲಿ ‘ಜಿಪಿಎಸ್’ ವ್ಯವಸ್ಥೆಯನ್ನು ಅಳವಡಿಸಿದರೆ, ಎರಡನೆಯ ವಿಧಾನವು ಆಧುನಿಕ ನಂಬರ್ ಪ್ಲೇಟ್ಗೆ ಸಂಬಂಧಿಸಿದೆ. ಸದ್ಯಕ್ಕೆ ಇದಕ್ಕಾಗಿ ಯೋಜನೆ ಜಾರಿಯಲ್ಲಿದೆ.

ತೆರಿಗೆ ಪಾವತಿಸದಿದ್ದಕ್ಕೆ ದಂಡವಿಲ್ಲ.!
ಇದೇ ವೇಳೆ ಟೋಲ್ ಟ್ಯಾಕ್ಸ್ ಪಾವತಿಸದವರಿಗೆ ಯಾವುದೇ ಶಿಕ್ಷೆ ಇರುವುದಿಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಟೋಲ್ ಟ್ಯಾಕ್ಸ್ ಪಾವತಿಸದಿದ್ದಕ್ಕೆ ಶಿಕ್ಷೆ ವಿಧಿಸುವ ಅವಕಾಶವಿಲ್ಲ ಎಂದು ಹೇಳಿದರು. ಇದಲ್ಲದೇ ಮುಂದಿನ ದಿನಗಳಲ್ಲಿ ಟೋಲ್ ಟ್ಯಾಕ್ಸ್ ಸಂಗ್ರಹಿಸಲು ತಂತ್ರಜ್ಞಾನದ ಬಳಕೆಗೂ ಒತ್ತು ನೀಡುತ್ತೇವೆ.

ಖಾತೆಯಿಂದ ಹಣದ ನೇರ ಡೆಬಿಟ್.!
ಇಲ್ಲಿಯವರೆಗೆ ಟೋಲ್ ಪಾವತಿಸದವರಿಗೆ ಶಿಕ್ಷೆಯ ಅವಕಾಶವಿಲ್ಲ, ಆದರೆ ಟೋಲ್ಗೆ ಸಂಬಂಧಿಸಿದ ಬಿಲ್ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದೀಗ ಟೋಲ್ ತೆರಿಗೆಯನ್ನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಇನ್ನು ಮುಂದೆ ಟೋಲ್ ಟ್ಯಾಕ್ಸ್ ಕಟ್ಟುವ ಅಗತ್ಯವಿಲ್ಲ, ನಿಮ್ಮ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸಲಾಗುವುದು ಎಂದರು. ಇನ್ನು ಕಾರುಗಳ ನಂಬರ್ ಪ್ಲೇಟ್ ವಿಚಾರದಲ್ಲೂ ನಿಯಮದಲ್ಲಿ ಬದಲಾವಣೆ ತರಲಾಗುವುದು ಎಂದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ