Breaking News

3 ಕಡೆ ಮನೆ ಬಾಡಿಗೆ ಪಡೆದು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಸುಂದರಿ ಗ್ಯಾಂಗ್​!

Spread the love

ರಾಯಚೂರು: ಬಾಡಿಗೆಗೆ ಮನೆ ಕೊಡೋಕು ಮುನ್ನ ಎಚ್ಚರ! ಮನೆ ಬಾಡಿಗೆ ಪಡೆಯೋ ನೆಪದಲ್ಲಿ ಸುಂದರ ಯುವತಿಯನ್ನ ಮುಂದೆ ಬಿಟ್ಟು ಸ್ಕೆಚ್ ಹಾಕ್ತಿತ್ತು. ಮನೆ ಮಾಲೀಕರನ್ನೇ ಬಲೆಗೆ ಬೀಳಿಸಿಕೊಂಡು ಎಲ್ಲವನ್ನೂ ದೋಚುತ್ತಿದ್ದಳು ಖತರ್ನಾಕ್ ಬ್ಯೂಟಿ ಲೇಡಿ… ಇವಳ ಗ್ಯಾಂಗ್​ ಮೇಲೆ ಆಂಧ್ರದಲ್ಲಿದೆ ಬರೋಬ್ಬರಿ 25 ಕೇಸ್​.

ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಈ ಗ್ಯಾಂಗ್​ ಕರ್ನಾಟಕದಲ್ಲೂ ಮಾಡಬಾರದ್ದು ಮಾಡಿ ರಾಯಚೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಅಂದಹಾಗೆ ಈಕೆಯ ಹಿಂದಿದೆ ಇಬ್ಬರು ಎಂಎಸ್ಸಿ ಪದವೀಧರರು ಸೇರಿ ನಾಲ್ವರ ಗ್ಯಾಂಗ್​. ಇವರ ಖತರ್ನಾಕ್​ ಕೃತ್ಯದ ಬಗ್ಗೆ ಇಲ್ಲಿದೆ ಮಾಹಿತಿ…

3 ಕಡೆ ಮನೆ ಬಾಡಿಗೆ ಪಡೆದು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಸುಂದರಿ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಇವರ ಹಿಸ್ಟರಿ

ಈಕೆಯ ಹೆಸರು ಸುಜಾತಾ ಅಲಿಯಾಸ್ ನಿಹಾರಿಕಾ. ಇಡೀ ಪ್ರಕರಣ ಕಿಂಗ್​ಪಿನ್ ಈಕೆಯೇ. ಇವಳ ಗ್ಯಾಂಗ್​ ಮೇಲೆ ಆಂಧ್ರದಲ್ಲಿದೆ ಬರೋಬ್ಬರಿ 25 ಕೇಸ್​. ಕರ್ನಾಟಕಕ್ಕೂ ಕಾಲಿಟ್ಟ ಈ ಗ್ಯಾಂಗ್​, ತಮ್ಮನ್ನು ಬ್ಯಾಂಕ್ ಸಿಬ್ಬಂದಿ, ಆಫೀಸರ್ ಅಂತ ಸುಳ್ಳು ಹೇಳಿ ಶ್ರೀಮಂತರ ಮನೆಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದರು. ಮನೆ ಬಾಡಿಗೆ ನೆಪದಲ್ಲಿ ಈಕೆಯನ್ನೇ ಮುಂದೆ ಬಿಟ್ಟು ಸ್ಕೆಚ್ ಹಾಕುತ್ತಿದ್ದರು. ಮನೆಗೆ ಎಂಟ್ರಿ ಕೊಡುತ್ತಿದ್ದ ಸುಂದರಿ ಸುಜಾತಾ ಮೊದಲಿಗೆ, ಮನೆ ಮಾಲೀಕರ ಬಳಿ ಸಲುಗೆಯಿಂದ ಮಾತನಾಡುತ್ತಾ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಆಪ್ತವಾಗಿ ಮಾತಾಡಿ ಎಲ್ಲ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಳು.

ಸುಜಾತಾ ಕೊಟ್ಟ ಮಾಹಿತಿಯಂತೆ ಮನೆಗಳನ್ನ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿತ್ತು ಗ್ಯಾಂಗ್​. ರಾಯಚೂರು ಜಿಲ್ಲೆಯಲ್ಲಿ ರಸ್ತೆ ಸಮೀಪದಲ್ಲೇ ಇರುವ ಶ್ರೀಮಂತರ ಮನೆಗಳನ್ನ ಟಾರ್ಗೆಟ್ ಮಾಡಿ ನಾಲ್ಕು ಕಡೆ ಕೋಟ್ಯಂತರ ಹಣ, ಚಿನ್ನಾಭರಣ ದೋಚಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿ, ಮನೆ ಮಂದಿಯ ಕೈ-ಕಾಲು ಕಟ್ಟಿ ಹಾಕಿ ದರೋಡೆ ಮಾಡುತ್ತಿದ್ದರು. ಈ ಗ್ಯಾಂಗ್​ನ ಕೃತ್ಯ ರಾಯಚೂರು ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿತ್ತು.

ಡಕಾಯಿತಿ ಜೊತೆಗೆ ಬೇರೆ ದಂಧೆಯನ್ನೂ ಮಾಡುತ್ತಿದ್ದಳಂತೆ ಸುಜಾತಾ. ಸ್ಥಳೀಯ ಮಹಿಳೆಯರನ್ನ ಪರಿಚಯಿಸಿಕೊಂಡು ವೇಶ್ಯಾವಟಿಕೆ ಜೊತೆಗೆ ಕಳ್ಳದಂಧೆಗೆ ಅನುಕೂಲ ಆಗಲೆಂದು ಸಿಂಧನೂರು, ಮಾನ್ವಿ ಹಾಗೂ ರಾಯಚೂರು ಸೇರಿ ಮೂರು ಕಡೆ ಮನೆ ಬಾಡಿಗೆ ಪಡೆದಿದ್ದಳು. ದೊಡ್ಡ ದೊಡ್ಡ ಮನೆಯ ಗಂಡಸರನ್ನ ಟಾರ್ಗೆಟ್ ಮಾಡಿ ಅಮಾಯಕ ಮಹಿಳೆಯರನ್ನ ಮುಂಡೆ ಇಟ್ಕೊಂಡು ಡಕಾಯಿತಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದಳು. ಸತತ ಒಂದು ತಿಂಗಳ ಕಾರ್ಯಾಚರಣೆ ಬಳಿಕ ನಾಲ್ವರಿದ್ದ ಡಕಾಯಿತರ ಟೀಂ ಅನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರ ಮೂಲದ ರಾಮಕೃಷ್ಣ, ಕುಮಾರ, ಅರ್ದಾನಿ ಲಕ್ಷ್ಮಣ ಹಾಗೂ ಸುಜಾತಾ ಬಂಧಿತರು. 520 ಗ್ರಾಂ ಬಂಗಾರ, 1.25 ಲಕ್ಷ ಹಣ, ನಿಸ್ಸಾನ್ ಮೈಕ್ರಾ ಹಾಗೂ ಟಾಟಾ ಇಂಡಿಕಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್​ ವಿರುದ್ಧ ಆಂಧ್ರದಲ್ಲಿ ಬರೋಬ್ಬರಿ 25 ಡಕಾಯಿತಿ ಪ್ರಕರಣಗಳಿವೆ.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ