ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸುವೆ. ಆದರೆ, ಎರಡು ಲಕ್ಷ ರೂಪಾಯಿ ಕೊಡುವುದಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಅರ್ಜಿ ಸಲ್ಲಿಸಿಯೇ ಸಲ್ಲಿಸುತ್ತೇನೆ.
ಆದರೆ, ಎರಡು ಲಕ್ಷ ರೂಪಾಯಿ ಕೊಡುವುದಿಲ್ಲ. ಎರಡು ಲಕ್ಷ ರೂಪಾಯಿ ಕೊಡುವ ಬಗ್ಗೆ ನಾಯಕರೊಂದಿಗೆ ಮಾತನಾಡಿರುವೆ ಎಂದರು.
ನಮ್ಮಂತಹ ಪ್ರಾಮಾಣಿಕರು ಏಕೆ ಎರಡು ಲಕ್ಷ ರೂಪಾಯಿ ಕೊಡಬೇಕು ಎಂದು ಪ್ರಶ್ನಿಸಿದ ಅವರು ಖಂಡಿತವಾಗಿಯೂ ಕಾದು ನೋಡಿ ಅರ್ಜಿ ಸಲ್ಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.