ರಾಯಬಾಗದಿಂದ ಚಿಕ್ಕೋಡಿ ತಾಲೂಕಿಗೆ ಸಂಪರ್ಕಿಸುವ ಅಂಕಲಿ -ಬಾವನಸವದತ್ತಿ ರಸ್ತೆಯ ಮಧ್ಯ ಭಾಗದಲ್ಲಿರುವ ಸೇತುವೆ ಮೇಲೆ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಅನೇಕ ಗುಂಡಿಗಳು ನಿರ್ಮಾಣವಾಗಿವೆ. ಇವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಗುಂಡಿಗಳು ತಪ್ಪಿಸಲು ಹೋಗಿ ಅನೇಕ ಅಪಘಾತ ಸಂಭವಿಸುತ್ತಿವೆ.
ಚಿಕ್ಕೋಡಿ,ರಾಯಬಾಗ ತಾಲೂಕಿಗೆ ಜೋಡಿಸುವ ಈ ರಸ್ತೆಯಾಗಿದ್ದು, ಬಾವನ ಸೌಂದತ್ತಿ, ಜಲಾಲಪುರ ದಿಗ್ಗೆವಾಡಿ, ಶಿವಶಕ್ತಿ ಸಕ್ಕರೆ ಕಾರ್ಖಾನೆ, ರಾಯಬಾಗ ಪಟ್ಟಣ, ಹಾಗೂ ಪ್ರಸಿದ್ದ ಶ್ರೀ ಮಾಯಕ್ಕ ಚಿಂಚಲಿಗೆ ಹೋಗುವ ಮುಖ್ಯ ರಸ್ತೆಯಾಗಿದೆ.ಚಿಕ್ಕೋಡಿ ಸಕ್ಕರೆ ಕಾರ್ಖಾನೆಗೆ ಸಾವಿರಾರು ಟನ್ ಕಬ್ಬು ಪ್ರತಿನಿತ್ಯ ಈ ರಸ್ತೆಯಿಂದಲೇ ಹೋಗುತ್ತದೆ. ದಿನನಿತ್ಯ ಈ ಸೇತುವೆ ಮೇಲೆ ಸಾವಿರಾರು ವಾಹನಗಳು ಓಡಾಡುತ್ತವೆ.
ರಸ್ತೆ ಇಷ್ಟೊಂದು ಹದಕ್ಕೆಟ್ಟರೂ ಸಹ ಚಿಕ್ಕೋಡಿ ಲೋಕೊಪಯೋಗಿ ಇಲಾಖೆಯವರು ಇತ್ತ ಗಮನಹರಿಸುತ್ತಿಲ್ಲ. ಈ ಭಾಗದ ಜನರ ಸುಮಾರು ದಿನಗಳ ಜನರ ಬೇಡಿಕೆ ಆಗಿದ್ದ ಈ ಸೇತುವೆ 2017 ರಲ್ಲಿ ಅಂದಿನ ಲೋಕಸಭಾ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರು ಈ ಸೇತುವೆ ಎತ್ತರಗೊಳಿಸಿ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದರು. ಸೇತುವೆಯ ಮೇಲಿನ ರಸ್ತೆ ಹಾಳಾದಗಿನಿಂದ ಇಂದಿನವರೆಗೆ ಎರಡು ಬಾರಿ ಕೃಷ್ಣಾ ನದಿ ಪ್ರವಾಹ ಬಂದು ಡಾಂಬರೀಕರಣ ಕಿತ್ತುಹೋಗಿದೆ.