ಮತ್ತೆ ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರು ಪುಂಡಾಟಿಕೆ ಮೆರೆದಿದ್ದು ಕರ್ನಾಟಕ ಬಸ್ ಗೆ ಕಲ್ಲು ತೂರಿ ಕನ್ನಡಿಗರನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
ಮಿರಜ್ ಕಾಗವಾಡ ಮಧ್ಯೆ ಕರ್ನಾಟಕ ಬಸ್ ಗೆ ಮಹಾರಾಷ್ಟ್ರ ಪುಂಡರು ಕಲ್ಲು ತೂರಿದ್ದಾರೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ಕರ್ನಾಟಕ ಬಸ್ ಇದಾಗಿದ್ದು, ನಿನ್ನೆ ರಾತ್ರಿ 10.30ಕ್ಕೆ ಚಲಿಸುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬಸ್ ಮುಂದಿನ ಗಾಜು ಜಖಂಗೊಂಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ ಬಸ್ ಇದಾಗಿದೆ.
ಕರ್ನಾಟಕ ಬಸ್ ಗಳಿಗೆ ಕಲ್ಲು ತೂರಾಟ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮಿರಜ್ ಹಾಗೂ ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಂತಿರುವ ಮಹಾರಾಷ್ಟ್ರ ಪುಂಡರಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡುವ ಕೆಲಸ ಮಾಡಬೇಕು. ಆ ಬಸ್ಸಿನಲ್ಲಿ ಯಾವುದೇ ಒಂದು ಭಾಷಿಕರು ಪ್ರಯಾಣ ಮಾಡುತ್ತಿರುವುದಿಲ್ಲ. ಯಾರಿಗಾದ್ರೂ ಜೀವಕ್ಕೆ ಹಾನಿ ಆದ್ರೆ ಅದಕ್ಕ ಹೊಣೆ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.