ಕಾಲು ಕೆರೆದು ಜಗಳಕ್ಕೆ ನಿಂತಿರುವ ಮರಾಠಿ ಪುಂಡರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗೆ ಮಸಿ ಬಳಿದ ಹಾಗೂ ಕಲ್ಲು ತೂರಾಟ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಕರವೇ ಶಿವರಾಮೇಗೌಡ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ನಗರದ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪ್ರತಿಕೃತಿ ಮೆರವಣಿಗೆ ಮಾಡಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕನ್ನಡ ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಾಜೀದ್ ಹಿರೇಕೂಡಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಬಸ್‍ಗಳ ಮೇಲೆ ಇನ್ಮುಂದೆ ಅನ್ಯಾಯ, ದಬ್ಬಾಳಿಕೆ ಮಾಡಿದ್ರೆ ನಿಮ್ಮ ಗಾಡಿ ಒಂದು ಕರ್ನಾಟಕಕ್ಕೆ ಬರಲು ವಿಚಾರ ಮಾಡಬೇಕು. ನಾವು ಜನರಿಗೆ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ನಿಮ್ಮಂತೆ ಕೀಳುಮಟ್ಟಕ್ಕೆ ನಾವು ಇಳಿಯುತ್ತಿಲ್ಲ. ನಮ್ಮ ಕರ್ನಾಟಕ ಸರ್ಕಾರ ಏನೂ ಬಳಿ ತೊಟ್ಟುಕೊಂಡು ಕುಳಿತಿಲ್ಲ. ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಮುಂದಿನ ವಾರ ಬೆಂಗಳೂರಿನಿಂದ ಸಾವಿರಾರು ಹೋರಾಟಗಾರರು ಬೆಳಗಾವಿಗೆ ಆಗಮಿಸಲಿದ್ದಾರೆ. ಎಂಇಎಸ್, ಶಿವಸೇನೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.