ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್, ‘ನಿಪ್ಪಾಣಿ, ಬೆಳಗಾವಿ ಸೇರಿದಂತೆ ಕೆಲ ಊರುಗಳನ್ನು ಬಿಟ್ಟು ಕೊಡಲು ಕರ್ನಾಟಕ ಒಪ್ಪಿದರೆ, ಅದಕ್ಕೆ ಪ್ರತಿಯಾಗಿ ಕೆಲ ಪ್ರದೇಶಗಳನ್ನು ಬಿಟ್ಟು ಕೊಡುವ ಬಗ್ಗೆ ನಾವೂ ಯೋಚಿಸಬಹುದು’ ಎಂದು ಹೇಳಿದ್ದಾರೆ.
‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದಿಂದ ಬಿಜೆಪಿ ಪಲಾಯನ ಮಾಡಲು ಸಾಧ್ಯವಿಲ್ಲ’ ಎಂದೂ ಅವರು ಪ್ರತಿಪಾದಿಸಿದರು.
ವಿರೋಧ ಪಕ್ಷಗಳ ಈ ಟೀಕೆಗಳಿಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಬಿಜೆಪಿಗಿಂತಲೂ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದಾಗ್ಯೂ, ಆ ಪಕ್ಷ ವಿವಾದವನ್ನು ಬಗೆಹರಿಸಲಿಲ್ಲ’ ಎಂದಿದ್ದಾರೆ.
‘ಈ ವಿವಾದ ಈಗ ಕೋರ್ಟ್‌ನಲ್ಲಿದೆ’ ಎಂದ ಅವರು, ‘ಮಹಾರಾಷ್ಟ್ರದ ಒಂದು ಹಳ್ಳಿ ಕೂಡ ಕರ್ನಾಟಕ್ಕೆ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
Laxmi News 24×7