ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿಯಿಂದ ಮರಾಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ ಅವರು, ಹಿಂಡಲಗಾ ಗ್ರಾ.ಪಂ.
ಅಧ್ಯಕ್ಷ ನಾಗೇಶ ಮನ್ನೋಳಕರ ಅವರನ್ನು ಜತೆಗೆ ಕರೆದೊಯ್ದು ಮರಾಠ ಸಮಾಜದ ಮುಖಂಡನೆಂದು ಪರಿಚಯಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಸಮುದಾಯ ಮತಗಳು ನಿರ್ಣಾಯಕವಾಗಿದ್ದು, ಸುಮಾರು ಒಂದೂವರೆ ಲಕ್ಷದಷ್ಟು ಮರಾಠಿ ಮತದಾರರು ಇರುವ ಈ ಕ್ಷೇತ್ರಕ್ಕೆ ಮರಾಠ ಅಭ್ಯರ್ಥಿಯೇ ಸೂಕ್ತ ಎಂಬುದು ರಮೇಶ ಜಾರಕಿಹೊಳಿ ಅವರ ಅಭಿಪ್ರಾಯವಾಗಿದೆ