ಕಳೆದ ಅನೇಕ ವರ್ಷಗಳಿಂದ ಹದಗೆಟ್ಟು ಹೋದ ಐನಾಪುರ್ -ಮೂಳೆ,3 ಕೋಟಿ ಸೇಡಬಾಳ ಸ್ಟೇಷನ ದಲ್ಲಿ 60 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಶುಕ್ರವಾರ ರಂದು ಶಾಸಕ ಶ್ರೀಮಂತ ಪಾಟೀಲರು ಸೇಡಬಾಳ ಸ್ಟೇಷನ್ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಶಾಸಕ ಶ್ರೀಮಂತ ಪಾಟೀಲರು ಅಭಿಯಂತರಿಗೆ ಮತ್ತು ಗುತ್ತಿಗೆದಾರರಿಗೆ ಗುಣಮಟ್ಟದ ರಸ್ತ ಕಾಮಗಾರಿ ನಿರ್ಮಿಸಲು ಸೂಚನೆ ನೀಡಿದರು ಕಳಪೆ ಕಾಮಗಾರಿ ಆದರೆ ನಿಮ್ಮಿಂದ ಮತ್ತೆ ಕಾಮಗಾರಿ ನಿರ್ಮಿಸುವ ವೇಳೆ ಬರಬಾರದು ಎಂದು ಎಚ್ಚರಿಕೆ ನೀಡಿದರು.
ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಮಾನತೇಶ್ ಕೊಲ್ಲಾಪುರೆ, ಬಿಜೆಪಿ ಪಕ್ಷದ ಮುಖಂಡರಾದ ಭರತೇಶ್ ಪಾಟೀಲ್, ಉತ್ಕರ್ಷಿ ಪಾಟೀಲ್, ಸಂದೀಪ್ ಸಾಳುಂಕೆ, ಪಟ್ಟಣ ಪಂಚಾಯಿತಿ ಸದಸ್ಯ ರೇಣುಕಾ ತುಕಾರಾಮ ಕನಕಾಂಬಳೆ, ಮಾರುತಿ ಮಾಕನವರ್, ನಾನಾಸಾಹೇಬ್ ಜಾದವ್ ,ಸಚಿನ್ ಹೊಸವಾಡೆ ಸೇರಿದಂತೆ ಅನೇಕರಿದ್ದರು.
ಐನಾಪುರ್ -ಮೂಳೆ ಮಾರ್ಗದ 3 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿ ಪೂಜಾ ಕಾರ್ಯಕ್ರಮದಲ್ಲಿ ತಮ್ಮನಾ ಪಾರ್ಶೆಟ್ಟಿ ದಾದಾ ಪಾಟೀಲ್, ರಾಜೇಂದ್ರ ಪೋತದಾರ್, ಮೋಹನ್ ಕಾರಚಿ, ಗುತ್ತಿಗೆದಾರರಾದ ಎ. ಜಿ. ಹಳ್ಳಿ ಶಿವು ಮಾಲಗಾವೆ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸಿತರಿದ್ದರು.